SK Home Ad
Home ನಮ್ಮ ಜಿಲ್ಲೆ ಧಾರವಾಡ ರೈತರೊಂದಿಗೆ ಡಿಸಿ ಸಭೆ: ಅಧಿಕಾರಿಗಳ ಸಂಧಾನದ ಯತ್ನ ವಿಫಲ

ರೈತರೊಂದಿಗೆ ಡಿಸಿ ಸಭೆ: ಅಧಿಕಾರಿಗಳ ಸಂಧಾನದ ಯತ್ನ ವಿಫಲ

0
11

ಧಾರವಾಡ: ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಕೈಬಿಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ನಡೆಸಿದ ಯತ್ನ ವಿಫಲವಾಗಿದೆ.

ರವಿವಾರ ಧಾರವಾಡ ಯರಿಕೊಪ್ಪ ಕ್ರಾಸ್‌ಗೆ ಮುಖಂಡ ಚೂನಪ್ಪ ಪೂಜಾರ ಸೇರಿದಂತೆ ಇತರೆ ಮುಖಂಡರನ್ನು ಕರೆಯಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಪೊಲೀಸ್ ಆಯುಕ್ತ ಭೂಷಣ ಬೋರಸೆ, ಎಸ್ಪಿ ಗುಂಜನ ಆರ್ಯ ಅವರು ರೈತರ ಮನವೊಲಿಸಲು ಯತ್ನಿಸಿದರು. ಆದರೆ, ಇದಕ್ಕೆ ಒಪ್ಪದ ರೈತರು ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟು ಹಿಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡ ಚೂನಪ್ಪ ಪೂಜಾರ, ತೇಗೂರಲ್ಲಿ ರೈತರು ಸೇರಲಿದ್ದಾರೆ. ಅಲ್ಲಿ ಕೇಂದ್ರ ಸಚಿವರು ಬರುತ್ತಾರೋ, ನಿಯೋಗ ಬರುತ್ತದೆಯೋ ಅಥವಾ ಯಾರು ಬರುತ್ತಾರೋ ಅವರು ನಮಗೆ ಪೂರಕ ಭರವಸೆ ನೀಡಿದರೆ ತಕ್ಷಣ ಪ್ರತಿಭಟನೆ ಹಿಂಪಡೆಯಲಾಗುವುದು. ಇಲ್ಲದಿದ್ದರೆ ಅ. 22ರಂದು ಯರಿಕೊಪ್ಪ ಬೈಪಾಸ್ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.