SK Home Ad
Home ನಮ್ಮ ಜಿಲ್ಲೆ ಧಾರವಾಡ ಕಬ್ಬು ರೈತರ ಪ್ರತಿಭಟನೆ ಎಫೆಕ್ಟ್‌: ಹುಬ್ಬಳ್ಳಿ-ಧಾರವಾಡದಲ್ಲಿ ಟ್ರಾಫಿಕ್‌ ರೂಟ್‌ ಚೇಂಜ್‌; ಇಲ್ಲಿದೆ ನೋಡಿ ಪರ್ಯಾಯ ಮಾರ್ಗ

ಕಬ್ಬು ರೈತರ ಪ್ರತಿಭಟನೆ ಎಫೆಕ್ಟ್‌: ಹುಬ್ಬಳ್ಳಿ-ಧಾರವಾಡದಲ್ಲಿ ಟ್ರಾಫಿಕ್‌ ರೂಟ್‌ ಚೇಂಜ್‌; ಇಲ್ಲಿದೆ ನೋಡಿ ಪರ್ಯಾಯ ಮಾರ್ಗ

0
29

ಹುಬ್ಬಳ್ಳಿ: ಕಬ್ಬಿಗೆ ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಯರಿಕೊಪ್ಪ ಕ್ರಾಸ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ.

ಪ್ರತಿಭಟನೆ ಮುಗಿಯುವವರೆಗೆ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ. ನರೇಂದ್ರ ಬೈಪಾಸ್ ಕಡೆಯಿಂದ ಹುಬ್ಬಳ್ಳಿಗೆ ಬರುವ ವಾಹನಗಳು ಅಗ್ರಿಕಲ್ಚರ್ ಯೂನಿವರ್ಸಿಟಿ, ಹೊಸ ಬಸ್ ನಿಲ್ದಾಣ, ಹಳೇ ಎಸ್.ಪಿ ಕಚೇರಿ ಸರ್ಕಲ್, ಜುಬ್ಬಿ ಸರ್ಕಲ್ ಮಾರ್ಗವಾಗಿ ಸಂಚರಿಸಬೇಕು.

ಬೆಳಗಾವಿ ಕಡೆಯಿಂದ ಸವದತ್ತಿ, ನವಲಗುಂದ, ಬಿಜಾಪುರಕ್ಕೆ ಹೋಗುವ ವಾಹನಗಳು ಹಳೇ ಎಸ್.ಪಿ ಕಚೇರಿ ಸರ್ಕಲ್, ಮರಾಠಾ ಕಾಲನಿ ಮಾರ್ಗವಾಗಿ ಹೋಗಬೇಕು. ಧಾರವಾಡದಿಂದ ಕಾರವಾರ ಮತ್ತು ಬೆಂಗಳೂರಿಗೆ ತೆರಳುವ ಲಘು ವಾಹನಗಳು ಹುಸೂರು, ವಾಣಿ ವಿಲಾಸ, ಎಂ.ಟಿ ಮಿಲ್, ಇಂದಿ ಪಂಪ್ ಸರ್ಕಲ್ ಮೂಲಕ, ಭಾರಿ ವಾಹನಗಳು ಗೋಕುಲ ರಸ್ತೆ, ತಾರಿಹಾಳ ಅಂಡರ್ ಬ್ರಿಡ್ಜ್ ಮೂಲಕ ಸಂಚರಿಸಬೇಕು.

ಗಬ್ಬೂರು ಸರ್ಕಲ್ ಬಂದ್ ಮಾಡಿದಲ್ಲಿ ಬೆಂಗಳೂರು-ಹುಬ್ಬಳ್ಳಿ ವಾಹನಗಳು ರಿಂಗ್ ರಸ್ತೆ, ಅಂಚಟಗೇರಿ ಮತ್ತು ಕಾರವಾರ ರಸ್ತೆ ಅಂಡರ್ ಬ್ರಿಡ್ಜ್ ಮಾರ್ಗ ಬಳಸಬೇಕು. ಕಲಘಟಗಿ ರಸ್ತೆಯಲ್ಲಿ ರಮ್ಯಾ ರೆಸಿಡೆನ್ಸಿ ಹೋಟೆಲ್ ಕಡೆ ಸಂಚಾರ ನಿಷೇಧಿಸಲಾಗಿದ್ದು, ಆ ಮಾರ್ಗದ ವಾಹನಗಳು ಉದಯಗಿರಿ ಡಬಲ್ ರಸ್ತೆ, ಟ್ರಿಪಲ್ ಐಟಿ, ಇಟಿಗಟ್ಟಿ ಮಾರ್ಗವಾಗಿ ಹೋಗಬೇಕು. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.