SK Home Ad
Home ನಮ್ಮ ಜಿಲ್ಲೆ ಧಾರವಾಡ ನಿಜವಾದ ರೈತರು ಹೇಳಿದರೆ ಬಿಡದಿ ಟೌನ್‌ಶಿಪ್ ಕೈ ಬಿಡ್ತೇವೆ

ನಿಜವಾದ ರೈತರು ಹೇಳಿದರೆ ಬಿಡದಿ ಟೌನ್‌ಶಿಪ್ ಕೈ ಬಿಡ್ತೇವೆ

0
59

ಹುಬ್ಬಳ್ಳಿ: ಬಿಡದಿಯಲ್ಲಿ ಟೌನ್‌ಶಿಪ್ ಸ್ಥಾಪನೆ ಬೇಡ ಎಂದು ನಿಜವಾದ ರೈತರು ಹೇಳಿದರೆ ನಾವು ಯೋಜನೆಯನ್ನು ಕೈ ಬಿಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ಬಿಡದಿ ಟೌನ್‌ಶಿಪ್ ಕುರಿತು ರಾಜಕೀಯ ಹೋರಾಟ ನಡೆಯುತ್ತಿದೆ. ರೈತರು ಬೇಡ ಎಂದು ಹೇಳಿದರೆ ನಾವು ಟೌನ್‌ಶಿಪ್ ಮಾಡಲು ಹೋಗುವುದಿಲ್ಲ. ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದರೆ 2013ರ ಭೂಸುಧಾರಣೆ ಕಾಯ್ದೆ ಪ್ರಕಾರ ಮಾರುಕಟ್ಟೆಯ ದರಕ್ಕಿಂತ ಮೂರುಪಟ್ಟು ಹಣ ನೀಡಬೇಕಾಗುತ್ತದೆ. ಇದು ನಮಗೂ ಹೊರೆಯಾಗಲಿದೆ ಎಂದರು.

ಹಿಂದೆ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ, ಎಚ್.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಇದ್ದಾಗ ಈ ಯೋಜನೆಗೆ ಹಸಿರು ನಿಶಾನೆ ತೋರಲಾಗಿತ್ತು. ಅದನ್ನೇ ನಾವು ಮುಂದುವರೆಸಿದ್ದೇವೆ ವಿನಃ ಇದರಲ್ಲಿ ಹೊಸತಿಲ್ಲ. ಈ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ಅನಗತ್ಯ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದರು.