Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಪಂಚಮಸಾಲಿ ಗುರುಪೀಠದಲ್ಲಿ ಗೊಂದಲ: ರಾಮನ ಲೆಕ್ಕ ಕೇಳಿದ ಸ್ವಾಮೀಜಿ

ಪಂಚಮಸಾಲಿ ಗುರುಪೀಠದಲ್ಲಿ ಗೊಂದಲ: ರಾಮನ ಲೆಕ್ಕ ಕೇಳಿದ ಸ್ವಾಮೀಜಿ

0
186

ಧರ್ಮದರ್ಶಿಗಳ ವಿರುದ್ಧ ಸ್ವಾಮೀಜಿ: ಮಠ ಬಿಡೋದಿಲ್ಲ ಎಂದು ಘೋಷಣೆ

ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಲೆಕ್ಕ ಮಂಡನೆ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಧರ್ಮದರ್ಶಿಗಳಿಂದ ಲೆಕ್ಕ ಮಂಡನೆ ಸಭೆ ಏರ್ಪಡಿಸಲಾಗಿದ್ದರೂ, ಶ್ರೀ ವಚನಾನಂದ ಸ್ವಾಮೀಜಿ ಅವರು ಕೊಡುವ ಕೃಷ್ಣನ ಲೆಕ್ಕ ನಾವು ಪಡೆಯುವುದಿಲ್ಲ, ಶ್ರೀರಾಮನ ಲೆಕ್ಕ ಕೊಟ್ಟರೆ ಮಾತ್ರ ನಾವು ಕೇಳುತ್ತೇವೆ ಎಂದು ಸಭೆಯಿಂದ ದೂರ ಉಳಿದಿದ್ದಾರೆ.

‘ಕೃಷ್ಣನ ಲೆಕ್ಕ ಬೇಡ, ಶ್ರೀರಾಮನ ಲೆಕ್ಕ ಬೇಕು’ : ಸಭೆಗೆ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, “ನಮಗೆ ಬೇಕಾದದ್ದು ಪಾರದರ್ಶಕ ಲೆಕ್ಕ. ಕೃಷ್ಣನ ಲೆಕ್ಕ ಬೇಡ, ಶ್ರೀರಾಮನ ಲೆಕ್ಕ ಕೊಡಬೇಕು” ಎಂದು ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ. 2008ರಿಂದಲೂ ಮಠದ ಆದಾಯ-ಖರ್ಚುಗಳ ಸಂಪೂರ್ಣ ವಿವರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.

“ಮಠ ನಾವು ಬಿಡೋದಿಲ್ಲ, ಧರ್ಮದರ್ಶಿಗಳೇ ಹೋಗಬೇಕು” : ಸ್ವಾಮೀಜಿ ಮತ್ತಷ್ಟು ತೀವ್ರವಾಗಿ ಪ್ರತಿಕ್ರಿಯಿಸಿ, “ಮಠವನ್ನು ನಾವು ತೊರೆಯುವುದಿಲ್ಲ. ಧರ್ಮದರ್ಶಿಗಳು ಗೌರವಯುತವಾಗಿ ಹೊರ ಹೋಗಬೇಕು” ಎಂದು ಹೇಳಿದ್ದಾರೆ. ಭಕ್ತರ ಒತ್ತಾಯದಿಂದಲೇ ಈ ಹೋರಾಟ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮಠ ಆವರಣದಲ್ಲಿ ಗದ್ದಲ : ಲೆಕ್ಕ ಮಂಡನೆ ಸಭೆಯ ವೇಳೆ ಮಠದ ಆವರಣದಲ್ಲಿ ಸ್ವಾಮೀಜಿ ಪರ ಹಾಗೂ ಟ್ರಸ್ಟಿ ಪರ ಭಕ್ತರು ಘೋಷಣೆ ಕೂಗಿ ಗೊಂದಲ ಸೃಷ್ಟಿಸಿದರು. ಲೆಕ್ಕಪತ್ರಗಳ ದಾಖಲೆಗಳನ್ನು ಸಭಾ ವೇದಿಕೆಗೆ ಕೊಂಡೊಯ್ಯುವ ಸಂದರ್ಭ ಉದ್ವಿಗ್ನತೆ ಹೆಚ್ಚಾಯಿತು. ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಭಕ್ತರನ್ನು ಸಮಾಧಾನಪಡಿಸಿದರು.

ಸ್ವಾಮೀಜಿ ಮಠದಲ್ಲೇ ಮುಂದುವರಿಕೆ : ಸಭೆಗೆ ಹಾಜರಾಗದ ಸ್ವಾಮೀಜಿ, ಮಠದಲ್ಲಿಯೇ ಉಳಿದು ಭಕ್ತರಿಗೆ ಆಶೀರ್ವಾದ ನೀಡುತ್ತಿದ್ದರು. “ಯಾವುದೇ ಕಾರಣಕ್ಕೂ ನಾವು ಈ ಸಭೆಗೆ ಹೋಗುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.