SK Home Ad
Home ನಮ್ಮ ಜಿಲ್ಲೆ ಬೆಂಗಳೂರು ‘ಅಗ್ನಿಪರೀಕ್ಷೆ’ ವೀಕ್ಷಿಸಿ, ಬಿಗ್ ಬಾಸ್ ಮನೆ ಪ್ರವೇಶಿಸುವ ಅವಕಾಶ!

‘ಅಗ್ನಿಪರೀಕ್ಷೆ’ ವೀಕ್ಷಿಸಿ, ಬಿಗ್ ಬಾಸ್ ಮನೆ ಪ್ರವೇಶಿಸುವ ಅವಕಾಶ!

0
2

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೂ ಮುನ್ನವೇ ವೀಕ್ಷಕರಿಗೆ ಭರ್ಜರಿ ಸುವರ್ಣಾವಕಾಶವೊಂದು ಸಿಕ್ಕಿದೆ. ಬಿಗ್‌ಬಾಸ್ ಮನೆಯೊಳಗೆ ಒಮ್ಮೆಯಾದರೂ ಕಾಲಿಡಬೇಕು ಎಂಬ ಕನಸು ಕಾಣುತ್ತಿರುವವರಿಗೆ ಕಲರ್ಸ್ ಕನ್ನಡ ಹೊಸ ಅವಕಾಶವನ್ನು ನೀಡುತ್ತಿದೆ.

ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮವನ್ನು ವೀಕ್ಷಿಸುವ ಮೂಲಕ ಈ ಅವಕಾಶವನ್ನು ಪಡೆದುಕೊಳ್ಳಬಹುದು. ವೀಕ್ಷಕರು ಕಾರ್ಯಕ್ರಮವನ್ನು ಹೆಚ್ಚು ಸಮಯ ವೀಕ್ಷಿಸಿ, ವಾಚ್ ಟೈಮ್ ದಾಖಲಿಸುವ ಮೂಲಕ ಪಾಯಿಂಟ್ಸ್ ಗಳಿಸಬೇಕಿದೆ.

ಅತಿ ಹೆಚ್ಚು ವಾಚ್ ಟೈಮ್ ದಾಖಲಿಸಿ, ಹೆಚ್ಚಿನ ಪಾಯಿಂಟ್ಸ್ ಗಳಿಸಿ ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆಯುವ 40 ಮಂದಿಗೆ ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಪ್ರವೇಶಿಸುವ ಅವಕಾಶ ದೊರೆಯಲಿದೆ.

ಮನರಂಜನೆಯ ಜೊತೆಗೆ ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಅಪರೂಪದ ಅವಕಾಶವನ್ನು ಗೆಲ್ಲಲು ಬಯಸುವವರು ಜಿಯೋ ಹಾಟ್‌ಸ್ಟಾರ್‌ನಲ್ಲಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೀಕ್ಷಿಸಿ ತಮ್ಮ ವಾಚ್ ಟೈಮ್ ಹೆಚ್ಚಿಸಿಕೊಳ್ಳಬಹುದು. ಆ ಮೂಲಕ ಹೆಚ್ಚಿನ ಪಾಯಿಂಟ್ಸ್ ಗಳಿಸಿ ಟಾಪ್ ಪಟ್ಟಿಗೆ ಏರಲು ಪ್ರಯತ್ನಿಸಬಹುದು.

ಹೀಗಾಗಿ ಬಿಗ್ ಬಾಸ್ ಅಭಿಮಾನಿಗಳಿಗೆ ಈ ಬಾರಿ ಮನರಂಜನೆಯ ಜೊತೆಗೆ ತಮ್ಮ ನೆಚ್ಚಿನ ರಿಯಾಲಿಟಿ ಶೋನ ಮನೆಯೊಳಗೆ ಪ್ರವೇಶಿಸುವ ಅವಕಾಶವೂ ಸಿಕ್ಕಂತಾಗಿದೆ. ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೀಕ್ಷಿಸಿ, ವಾಚ್ ಟೈಮ್ ಹೆಚ್ಚಿಸಿ, ಪಾಯಿಂಟ್ಸ್ ಗಳಿಸಿ ಮತ್ತು ಟಾಪ್ 40ರಲ್ಲಿ ಸ್ಥಾನ ಪಡೆಯುವ ಮೂಲಕ ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗುವ ಅವಕಾಶವನ್ನು ಪಡೆದುಕೊಳ್ಳಿ.