SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಎಲ್ಲಾರೂ ಸೇರಿ ಉತ್ತರ ಕರ್ನಾಟಕ ಉತ್ಸವ ಮಾಡೂನು ಬರ್ರಿ

ಎಲ್ಲಾರೂ ಸೇರಿ ಉತ್ತರ ಕರ್ನಾಟಕ ಉತ್ಸವ ಮಾಡೂನು ಬರ್ರಿ

0
85

ಬೆಂಗಳೂರು: ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ವತಿಯಿಂದ ನವೆಂಬರ್ 29 ರಂದು ಬೆಂಗಳೂರಿನ ಅರಮನೆ ಮೈದಾನ ಗೇಟ್ ನಂಬರ್ 7, ಶೀಶ್ ಮಹಲ್‌ನಲ್ಲಿ ಆಯೋಜಿಸಿರುವ ಉತ್ತರ ಕರ್ನಾಟಕ ಉತ್ಸವ 2026ರ ಕಾರ್ಯಕ್ರಮದ ಪೋಸ್ಟರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಬೆಂಗಳೂರಿನ ಆರ್.ಟಿ. ನಗರದ ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಪ್ರತಿ ವರ್ಷ ಉತ್ತರ ಕರ್ನಾಟಕ ಉತ್ಸವ ಮಾಡುತ್ತಾರೆ. ಈ ವರ್ಷವೂ ನವೆಂಬರ್ 29 ರಂದು ಬೆಂಗಳೂರಿನ ಅರಮನೆ ಮೈದಾನ ಶೀಶ್ ಮಹಲ್‌ನಲ್ಲಿ ಉತ್ತರ ಕರ್ನಾಟಕ ಉತ್ಸವ ಆಯೋಜನೆ ಮಾಡಿದ್ದಾರೆ. ಈ ಉತ್ಸವದಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದ ಆಟಗಳಾದ ಬುಗರಿ ಆಟ, ಚಿನ್ನಿದಾಂಡು, ಲಗೋರಿ, ಖೋ ಖೊ, ಜಗ್ಗಲಗಿ ಜಾನಪದ ಮೇಳ, ಹೆಜ್ಜೆ ಮೇಳ ಎಲ್ಲವೂ ಇದೆ. ಈ ಕಾರ್ಯಕ್ರದಲ್ಲಿ ಭಾಗವಹಿಸಿದರೆ ಎಲ್ಲರೂ ನಮ್ಮ ಊರಾಗ ಅದೇವಿ ಅಂತ ಅನಿಸುತ್ತದೆ. ನಾವೆಲ್ಲರೂ ಒಂದೆಡೆ ಸೇರಿ ನಮ್ಮ ಉತ್ತರ ಕರ್ನಾಟಕ ಹಬ್ಬ ಮಾಡೋಣ ಬನ್ನಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ ಮೇಟಿ, ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ, ನಿರ್ದೇಶಕರಾದ ದೇವರಾಜ ಕವಳಿಕಾಯಿ, ಉತ್ತರ ಕರ್ನಾಟಕ ಭಾಗದ ಮುಖಂಡರಾದ ಉಮೇಶ್ ಪಾಟೀಲ್, ಶರಣು ನಾವದಗಿ ಹಾಜರಿದ್ದರು.