SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಹೊಸ ಸಿಎಂ ಬಂದ ಮೇಲೆ ಕಮಿಷನ್ ಪ್ರಮಾಣ ಶೇ. 70ಕ್ಕೆ ಹೆಚ್ಚಳ

ಹೊಸ ಸಿಎಂ ಬಂದ ಮೇಲೆ ಕಮಿಷನ್ ಪ್ರಮಾಣ ಶೇ. 70ಕ್ಕೆ ಹೆಚ್ಚಳ

0
58

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ ಸರಕಾರಿ ಕಾಮಗಾರಿಗಳ ಕಮಿಷನ್ ಪ್ರಮಾಣ ಶೇ. 60ರಿಂದ ಶೇ. 70ಕ್ಕೆ ಹೆಚ್ಚಳವಾಗಬಹುದೇ ವಿನಃ ರಾಜ್ಯದ ಜನರಿಗೆ ಯಾವುದೇ ಅನುಕೂಲ ಆಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಟೀಕಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ರಾಜದ ಡಿಸಿಎಂ ಆದವರು ಮುಖ್ಯಮಂತ್ರಿ ಆಗುತ್ತಿದ್ದಾರೆ. ಅದರಲ್ಲಿ ಏನು ವಿಶೇಷ ಇಲ್ಲ. ಡಿ.ಕೆ. ಶಿವಕುಮಾರ್ ಸಿಎಂ ಆದ ಮೇಲೆ ಸರ್ಕಾರದ ನೀತಿ ಬದಲಾವಣೆ ಆಗುವುದಿಲ್ಲ. ಬದಲಾಗಿ ರಾಜ್ಯದ ಜನರ ನೆಮ್ಮದಿ ಇರಲಾಗದ ಪರಿಸ್ಥಿತಿ ಬರುತ್ತದೆ. ರಾಜ್ಯಕ್ಕೆ ಒಳ್ಳೆಯದು ಮಾಡುವ ದೃಷ್ಟಿ ಇರಬೇಕು. ಆದರೆ ಪರಿಸ್ಥಿತಿ ಹಾಗಿಲ್ಲ ಎಂದರು.

ಹೊಸ ಸಿಎಂಗೆ ಸವಾಲು: ಬಿಜೆಪಿ ಶಾಸಕ ಮಹೇಶ್ ತೆಂಗಿನಕಾಯಿ ಹೇಳಿಕೆ ನೀಡಿ, ಹೊಸ ಸಿಎಂ ಮೇಲೆ ಜನರು ನಿರೀಕ್ಷೆ ಇದೆ. ಅಭಿವೃದ್ಧಿ ಕುಂಟಿತವಾಗಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ 5 ಸಾವಿರ ಕೋಟಿ ರೂ. ಗೃಹಲಕ್ಷ್ಮೀ ಕೊಟ್ಟಿಲ್ಲ ಎಂಬುದಕ್ಕೆ ಸರಕಾರ ಒಪ್ಪಿಕೊಂಡಿದೆ. ನಾನು ನೂತನ ಸಿಎಂಗೂ ಮನವಿ ಮಾಡುತ್ತೇನೆ. ತಾಯಂದಿರಿಗೆ ಎರಡು ತಿಂಗಳ ಹಣ ಕೊಡಬೇಕು ಎಂದು ಆಗ್ರಹಿಸಿದರು.