SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಶಾಲಾ ಬಸ್ ಬಿದ್ದು ಮಹಿಳೆ ಸಾವು

ಶಾಲಾ ಬಸ್ ಬಿದ್ದು ಮಹಿಳೆ ಸಾವು

0
243
BUS

ಶಿರಸಿ: ಶಾಲಾ ಬಸ್ ಉರುಳಿಬಿದ್ದು ಮಹಿಳೆಯೋರ್ವರು ಮೃತಪಟ್ಟು, ೧೨ ಜನ ಗಾಯಗೊಂಡ ಘಟನೆ ತಾಲೂಕಿನ ಬುಗಡಿಕೊಪ್ಪ ಗ್ರಾಮದ ಭೂತೇಶ್ವರ ದೇವಸ್ಥಾನದ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಅಪಘಾತದಲ್ಲಿ ಶಾಲಾ ಸಿಬ್ಬಂದಿ ಕಸ್ತೂರಮ್ಮ ಮೃತಪಟ್ಟಿದ್ದು, ೧೨ ಮಂದಿ ಗಾಯಗೊಂಡಿದ್ದಾರೆ. ರಾಣಿಬೆನ್ನೂರಿನ ಸಿದ್ಧಾರೂಢ ನಗರದ ಪರಿಣಿತಿ ವಿದ್ಯಾಮಂದಿರದ ಶಾಲಾ ಸಿಬ್ಬಂದಿ ಶಿರಸಿ ಮಾರಿಕಾಂಬಾ ದೇವಿಯ ದರ್ಶನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.