SK Home Ad
Home ಸುದ್ದಿ ರಾಜ್ಯ ಮೈಸೂರು: ಜಂಬೂಸವಾರಿಗೆ ಕ್ಷಣಗಣನೆ

ಮೈಸೂರು: ಜಂಬೂಸವಾರಿಗೆ ಕ್ಷಣಗಣನೆ

0
3

ಮೈಸೂರು: ಜಂಬೂಸವಾರಿಗೆ ಸಾಂಸ್ಕೃತಿಕ ನಗರ ಮದುವಣಗಿತ್ತಿಯಂತೆ ಶೃಂಗರಿಸಿಕೊಂಡು ನಿಂತಿದೆ. ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರಲಿರುವ ಪ್ರಶಾಂತನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈಗಾಗಲೇ ದಸರಾಕ್ಕೆ ಅಗತ್ಯವಿರುವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಹಾಗೂ ಪ್ರವಾಸಿಗರು ಕಾತುರರಾಗಿದ್ದಾರೆ.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಮೇಲೆ ಮೊದಲ ದಸರಾ ಆಗಿರುವುದರಿಂದ ವಿಭಿನ್ನ ಹಾಗೂ ಅತ್ಯಂತ ವಿಶೇಷವಾಗಿ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

18 ವರ್ಷ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಪ್ರಶಾಂತ ಆನೆ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರಲಿದೆ. ಇದರೊಂದಿಗೆ 12 ಆನೆಗಳು ಸಾಗಲಿವೆ. ಬುಧವಾರ ಮಧ್ಯಾಹ್ನ 1.36 ರಿಂದ 1.56ರ ನಡುವಿನ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ನಂದಿ ಧ್ವಜ ಪೂಜೆ. ಸಂಜೆ 4.10 ರಿಂದ 4.35 ರ ನಡುವಿನ ಶುಭ ಮೀನ ಲಗ್ನದಲ್ಲಿ, ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ.

ಮೆರವಣಿಗೆಯಲ್ಲಿ ನಾಡು, ಹೊರ ನಾಡಿನ ಸಾಂಸ್ಕೃತಿಕ, ಜಾನಪದ ಕಲೆ ಬಿಂಬಿಸುವ ತಂಡ, ಸ್ತಬ್ಧಚಿತ್ರಗಳು ಎಲ್ಲರನ್ನೂ ಆಕರ್ಷಿಸಲಿವೆ. ಅಂದೇ ಸಂಜೆ 7ಕ್ಕೆ, ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ, ಟಾರ್ಚ್ ಲೈಟ್ ಪರೇಡ್ ನಡೆಯಲಿದ್ದು, ರಾಜ್ಯಪಾಲರು ಗೌರವ ವಂದನೆ ಸ್ವೀಕರಿಸುವರು.

ವಜ್ರಮುಷ್ಠಿ ಕಾಳಗಕ್ಕೆ ಮೈಸೂರಿನ ಮಹೇಶ್ ಜೆಟ್ಟಿ, ಬೆಂಗಳೂರಿನ ಚೇತನ್ ಜೆಟ್ಟಿ, ಚಾಮರಾಜನಗರದ ಸತೀಶ್ ಜೆಟ್ಟಿ, ಚನ್ನಪಟ್ಟಣದ ತೇಜಸ್ ಶೆಟ್ಟಿ ಅವರ ಹೆಸರನ್ನು ವಜ್ರಮುಷ್ಠಿ ಕಾಳಗಕ್ಕೆ ಉಸ್ತಾದರು ಅಂತಿಮಗೊಳಿಸಿದರು.

ಲೋಹದ ಹಕ್ಕಿಗಳ ಕಲರವ: ಏರ್ ಶೋ ಸಾವಿರಾರು ಜನರು ನೋಡಿ ಕಣ್ತುಂಬಿಕೊಂಡರು. ಮೋಡ ಕವಿದ ವಾತಾವರಣವಿದ್ದ ಕಾರಣ ಆತಂಕದಲ್ಲಿದ್ದ ಜನರು ಕೊನೆಗೂ ಸಂತಸಪಟ್ಟರು. ಲೋಹದ ಹಕ್ಕಿಗಳನ್ನು ಆಗಸದಲ್ಲಿ ನೋಡಿ ಸಂಭ್ರಮಿಸಿದರು.

6000 ಸಾವಿರ ಪೊಲೀಸರ ಭದ್ರತೆ: ದಸರಾ ಹಿನ್ನೆಲೆಯಲ್ಲಿ ಈಗಾಗಲೇ ಹೊರ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ನಗರಕ್ಕೆ ಆಗಮಿಸಿದ್ದಾರೆ. ಸರಿಸುಮಾರು 6 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.