ಮೋಹನ ಹಲವಾಯಿ ಮರು ಆಯ್ಕೆಗೆ ಯತ್ನ; ವಯೋಮಿತಿ ನಿಯಮದಿಂದ ಆರು ಆಕಾಂಕ್ಷಿಗಳಿಗೆ ಹಿನ್ನಡೆ ಸಾಧ್ಯತೆ
ದಾಂಡೇಲಿ (ಸಂ.ಕ.ಸಮಾಚಾರ) : ದಾಂಡೇಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆ ಕಾಂಗ್ರೆಸ್ ವಲಯದಲ್ಲಿ ಕುತೂಹಲ ಮೂಡಿಸಿದೆ. ಹಾಲಿ ಅಧ್ಯಕ್ಷ ಮೋಹನ ಹಲವಾಯಿ ಮರು ಆಯ್ಕೆಗೆ ಪ್ರಯತ್ನಿಸುತ್ತಿದ್ದರೆ, ಅವರ ವಿರುದ್ಧ ಪಕ್ಷದೊಳಗೆ ಅಸಮಾಧಾನವಿದೆ ಎನ್ನಲಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಒಂಬತ್ತು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ವರಿಷ್ಠರ ಬೆಂಬಲ ಪಡೆಯಲು ಪ್ರಯತ್ನಗಳು ನಡೆಯುತ್ತಿವೆ.
ಮೋಹನ ಹಲವಾಯಿ, ತಸ್ವರ ಸೌದಾಘರ, ಆರ್.ಪಿ. ನಾಯ್ಕ, ಎಸ್.ಎಸ್. ಪೂಜಾರ, ಮಹ್ಮದ್ ರಫೀಕ್ ಖಾನ, ರಾಜಶೇಖರ ಈಶ್ವರಪ್ಪ ಹರಿಜನ, ಮಹ್ಮದ್ ಉಸ್ಮಾನಶೇಖ, ಇಲಿಯಾಸ್ ಕಾಟಿ ಹಾಗೂ ದಾದಾಪೀರ್ ನದಿಯಲ್ಲಾ ಆಕಾಂಕ್ಷಿಗಳಾಗಿದ್ದಾರೆ.
ಎಐಸಿಸಿ ಮಾರ್ಗಸೂಚಿಯಂತೆ 40 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನವರಿಗೆ ಅವಕಾಶ ನೀಡುವ ಮಾನದಂಡ ಕಟ್ಟುನಿಟ್ಟಾಗಿ ಜಾರಿಯಾದರೆ, ಒಂಬತ್ತು ಆಕಾಂಕ್ಷಿಗಳ ಪೈಕಿ ಆರು ಮಂದಿ ಸ್ಪರ್ಧೆಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೋಹನ ಹಲವಾಯಿ, ಮಹ್ಮದ್ ರಫೀಕ್ ಖಾನ ಹಾಗೂ ರಾಜಶೇಖರ ಈಶ್ವರಪ್ಪ ಹರಿಜನ ಅವರ ಹೆಸರುಗಳು ಪ್ರಮುಖವಾಗಿ ಚರ್ಚೆಯಲ್ಲಿವೆ. ಆದರೆ ಅರ್ಹತೆ ಕುರಿತು ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.
ಈ ಬಾರಿ ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡುವ ಸಾಧ್ಯತೆಯ ಚರ್ಚೆಯಿಂದ ಮಹ್ಮದ್ ರಫೀಕ್ ಖಾನ ಅವರ ಉಮೇದುವಾರಿಕೆ ಗಮನ ಸೆಳೆದಿದೆ. ದಲಿತ ಸಮುದಾಯದ ಪ್ರತಿನಿಧಿಯಾಗಿ ವಕೀಲ ರಾಜಶೇಖರ ಈಶ್ವರಪ್ಪ ಹರಿಜನ ಕೂಡ ಆಕಾಂಕ್ಷಿಯಾಗಿದ್ದಾರೆ.
ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ನಾಯ್ಕ ಅವರ ಸಮಾಲೋಚನೆ ಆಯ್ಕೆ ಪ್ರಕ್ರಿಯೆಯಲ್ಲಿ ಮಹತ್ವ ಪಡೆಯುವ ನಿರೀಕ್ಷೆಯಿದೆ. ವಯೋಮಿತಿ ನಿಯಮಕ್ಕೆ ಸಡಿಲಿಕೆ ದೊರೆಯುತ್ತದೆಯೇ, ಹಾಲಿ ಅಧ್ಯಕ್ಷರು ಮುಂದುವರಿಯುತ್ತಾರೆಯೇ ಅಥವಾ ಹೊಸ ಮುಖಕ್ಕೆ ಅವಕಾಶ ಸಿಗುತ್ತದೆಯೇ ಎಂಬುದಕ್ಕೆ ಪಕ್ಷದ ಅಧಿಕೃತ ಘೋಷಣೆಯೇ ಉತ್ತರ ನೀಡಬೇಕಿದೆ.
- ಆಸ್ಪತ್ರೆಗಳಲ್ಲಿ ಏಕಬಳಕೆಯ ವೈದ್ಯಕೀಯ ಸಾಧನಗಳ ಮರುಬಳಕೆಗೆ ಕಟ್ಟುನಿಟ್ಟಿನ ನಿಷೇಧ
- ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ತಪ್ಪಿತಸ್ಥರಿಗೆ ರಕ್ಷಣೆ ಇಲ್ಲ: ಡಿ.ಕೆ. ಶಿವಕುಮಾರ್
- ಸೌದಿಯಲ್ಲಿ ಸಿಲುಕಿದ ಕನ್ನಡಿಗರ ನೆರವಿಗೆ ಸಹಾಯವಾಣಿ: ಸುರಕ್ಷಿತ ವಾಪಸಾತಿಗೆ ರಾಜ್ಯ ಸರ್ಕಾರದ ಪ್ರಯತ್ನ
- ಬಹುಮುಖ ಪ್ರತಿಭೆ ಎನ್. ಪ್ರಿಯಾ ನೃತ್ಯಪಯಣಕ್ಕೆ ಹೊಸ ಹೆಜ್ಜೆ
- ವಿಶ್ವ ಪೋಲಿಯೊ ದಿನ : ಮಕ್ಕಳ ಭವಿಷ್ಯಕ್ಕೆ 2 ಹನಿ ರಕ್ಷಣೆಯ ಮಹತ್ವ






















