SK Home Ad
Home ನಮ್ಮ ಜಿಲ್ಲೆ ಧಾರವಾಡ ಸರ್ಕಾರ ಅಸ್ಥಿರಗೊಳಿಸಲು ಸಿದ್ದರಾಮಯ್ಯ ಆಟ ಈಗ ಶುರು

ಸರ್ಕಾರ ಅಸ್ಥಿರಗೊಳಿಸಲು ಸಿದ್ದರಾಮಯ್ಯ ಆಟ ಈಗ ಶುರು

0
174

ಧಾರವಾಡ: ಸರಕಾರ ಸುಸೂತ್ರವಾಗಿ ನಡೆಯಬಾರದು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಈಗಲೇ ತಮ್ಮ ಆಟ ಶುರು ಮಾಡಿಕೊಂಡಿದ್ದಾರೆ ಎಂದು ವಿಧಾನಸಭೆ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಎಂದಾಗಲೇ ನಾನು ಈ ಮೊದಲೇ ಹೇಳಿದ್ದೆ. ಸದ್ಯ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಈಗ ಈ ರೀತಿ ಹಿಂದಿನಿಂದ ಅವರು ಆಟ ಶುರು ಮಾಡಿದ್ದಾರೆ ಎಂದರು.

ಇವರಿಗೆ ರಾಜ್ಯದ ಮತ್ತು ಜನತೆಯ ಬಗ್ಗೆ ಕಾಳಜಿ ಇಲ್ಲ. ಸಚಿವರು ತಮಗೆ ಇಷ್ಟವಾದ ಖಾತೆ ಬೇಕು, ಅವರಂತೆ ಕೇಳುವ ಅಧಿಕಾರಿಗಳು ಬೇಕು ಎಂದು ಹೊಡೆದಾಡುತ್ತಿದ್ದಾರೆ. ಈಗಿನ ಸರಕಾರ ಮಾತ್ರ ಇರುವಷ್ಟು ದಿನ ಕಿತ್ತಾಡಿಕೊಂಡು ತಮ್ಮ ಬೊಕ್ಕಸ ತುಂಬಿಕೊಂಡು ಹೋಗುತ್ತಾರೆ ಎಂದರು.

ಮೊದಲಿನಿಂದಲೂ ಪ್ರಿಯಾಂಕ ಖರ್ಗೆ ಆರ್‌ಎಸ್‌ಎಸ್ ವಿರೋಧಿಸುತ್ತಲೇ ಬಂದಿದ್ದಾರೆ. ಈಗ ಅವರಿಗೆ ಗೃಹ ಖಾತೆ ಸಿಕ್ಕಿದೆ. ಅದು ಬಹಳ ಜವಾಬ್ದಾರಿಯುತ ಖಾತೆ. ಅವರು ಅದನ್ನು ಸರಿಯಾಗಿ ನಿಭಾಯಿಸಬೇಕು. ಆರ್‌ಎಸ್‌ಎಸ್ ಒಳ್ಳೆಯ ಕೆಲಸ ಮಾಡುತ್ತಿರುವುದರಿಂದಲೇ ಜನ ಅದನ್ನು ಬೆಂಬಲಿಸಿದ್ದಾರೆ. ಯಾರೋ ಏನೋ ಹೇಳುತ್ತಾರೆ ಎಂದು ಅದನ್ನು ಕಾಮಾಲೆ ಕಣ್ಣಿನಿಂದ ನೋಡಬಾರದು ಎಂದರು.