SK Home Ad
Home ನಮ್ಮ ಜಿಲ್ಲೆ ಧಾರವಾಡ ನವಲಗುಂದದಲ್ಲಿ ಆರ್‌ಸಿಬಿ ಅಭಿಮಾನಿಗಳ ಅದ್ದೂರಿ ಸಂಭ್ರಮಾಚರಣೆ

ನವಲಗುಂದದಲ್ಲಿ ಆರ್‌ಸಿಬಿ ಅಭಿಮಾನಿಗಳ ಅದ್ದೂರಿ ಸಂಭ್ರಮಾಚರಣೆ

0
50

ಧಾರವಾಡ (ನವಲಗುಂದ): ಐಪಿಎಲ್ ಪ್ರಯುಕ್ತ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ಬೃಹದಾಕಾರದ ಎಲ್‌ಸಿಡಿ ಟಿವಿಯನ್ನು ಅಳವಡಿಸಿ, ಆರ್‌ಸಿಬಿ ಅಭಿಮಾನಿಗಳು ಕ್ರಿಕೆಟ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.

ಪಂದ್ಯ ಆರಂಭಕ್ಕೂ ಮುನ್ನವೇ ಅಭಿಮಾನಿಗಳು ಟಿವಿಗೆ ಪೂಜೆ ಪುನಸ್ಕಾರ ನೆರವೇರಿಸಿ, ಆರ್‌ಸಿಬಿ ತಂಡ ಗೆಲುವು ಸಾಧಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಬಳಿಕ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಒಂದೇ ಸ್ಥಳದಲ್ಲಿ ಸೇರಿ ಪಂದ್ಯವನ್ನು ಉತ್ಸಾಹಭರಿತವಾಗಿ ವೀಕ್ಷಿಸಿದರು.

ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರ ಆರ್ಭಟದ ಬ್ಯಾಟಿಂಗ್ ಅಭಿಮಾನಿಗಳಲ್ಲಿ ಉತ್ಸಾಹ ತುಂಬಿತು. ಪ್ರತಿಯೊಂದು ಸಿಕ್ಸ್ ಹಾಗೂ ಫೋರ್‌ಗೆ ಅಭಿಮಾನಿಗಳು ಕೂಗಾಟಗಳೊಂದಿಗೆ ಹರ್ಷ ವ್ಯಕ್ತಪಡಿಸಿದರು.

ಇನ್ನು ತಂಡದ ಗೆಲುವು ಸಮೀಪಿಸುತ್ತಿದ್ದಂತೆ ಅಭಿಮಾನಿಗಳಲ್ಲಿ ಹರ್ಷೋದ್ಗಾರ ಮೆರೆಯಿತು. ಪಟಾಕಿ, ರಾಕೆಟ್ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.

ಇದೇ ವೇಳೆ ನಗರದ ದೇಸಾಯಿ ಪೇಟೆ ಓಣಿಯಲ್ಲಿಯೂ ಅಭಿಮಾನಿಗಳು ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಯುವಕರು ತಂಡದ ಗೆಲುವನ್ನು ಹರ್ಷೋದ್ಗಾರಗಳೊಂದಿಗೆ ಆಚರಿಸಿ ಹಬ್ಬದ ವಾತಾವರಣ ನಿರ್ಮಿಸಿದರು.

ಈ ಸಂದರ್ಭದಲ್ಲಿ ಸಾವಿರಾರು ಆರ್‌ಸಿಬಿ ಅಭಿಮಾನಿಗಳು ಪಾಲ್ಗೊಂಡು, ಪಟ್ಟಣದಲ್ಲಿ ಸಂಭ್ರಮದ ವಾತಾವರಣ ಉಂಟುಮಾಡಿದರು.