ಚಿಕ್ಕಮಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ಮೇಲೆ ಪ್ರತಿಕ್ರಿಯೆ ನೀಡೋದು ಸೂಕ್ತ. ರಾಜಕಾರಣದಲ್ಲಿ ಕಪ್-ಲಿಪ್ ಮಧ್ಯೆಯ ಅಂತರದಲ್ಲಿ ಏನು ಬೇಕಾದರೂ ಆಗಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಜನರ ಅಪೇಕ್ಷೆ-ನಿರೀಕ್ಷೆಗೆ ಕೆಲಸ ಮಾಡುತ್ತಿದೆಯೇ ಎನ್ನುವುದು ಪ್ರಶ್ನಾರ್ಥಕ ಚಿನ್ಹೆ. ಮುಂದೆ ಯಾರು ಬರುತ್ತಾರೆ ಏನು ಮಾಡುತ್ತಾರೆ ಎಷ್ಟು ದಿನ ಇರುತ್ತಾರೆ ನೋಡೋಣವೆಂದು ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಕಾಂಗ್ರೆಸ್ ಕುರುಬ ಸಮುದಾಯದವರನ್ನು ಎದುರು ಹಾಕಿಕೊಳ್ಳುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿ, ಇದಕ್ಕೆ ಈಗಲೇ ಏನೂ ಹೇಳುವುದಕ್ಕೆ ಆಗುವುದಿಲ್ಲ. ಬರುವವರು ಹೇಗೆ ಆಡಳಿತ ನಡೆಸುತ್ತಾರೆ, ಎಷ್ಟು ಜನಪರವಾಗಿ ಕೆಲಸ ಮಾಡುತ್ತಾರೆ ಎನ್ನುವುದರ ಮೇಲೆ ಅವಲಂಬನೆಯಾಗುತ್ತದೆ ಎಂದರು.
ಮೂರು ದಶಕದಿಂದ ದಲಿತರ ಮೂಗಿಗೆ, ಮೊಣಕೈಗೆ ತುಪ್ಪ ಸವರುವ ಕೆಲಸ ಆಗುತ್ತಿದೆ. ದಲಿತ ಸಿಎಂ ಮಾಡಿದರೆ ಖರ್ಗೆ, ಪರಮೇಶ್ವರ್ ಈಗಾಗಲೇ ಮಾಜಿ ಆಗಿರಬೇಕಿತ್ತು, ಮಾಡಿದ್ದಾರೆಯೇ? ರಾಷ್ಟ್ರ ರಾಜಕಾರಣಕ್ಕೆ ಸಿದ್ದು, ಊಹಾಪೋಹಾ ಅಷ್ಟೆ, ಖಚಿತತೆ ಇಲ್ಲವೆಂದು ತಿಳಿಸಿದರು.






















