SK Home Ad
Home ಸುದ್ದಿ ರಾಜ್ಯ ಶತಾವಧಾನಿ ಆರ್. ಗಣೇಶ್, ಅಂಕೇಗೌಡ, ಸುಶೀಲಮ್ಮಗೆ ಪದ್ಮ ಪ್ರಶಸ್ತಿ ಪ್ರದಾನ

ಶತಾವಧಾನಿ ಆರ್. ಗಣೇಶ್, ಅಂಕೇಗೌಡ, ಸುಶೀಲಮ್ಮಗೆ ಪದ್ಮ ಪ್ರಶಸ್ತಿ ಪ್ರದಾನ

0
35

ಹುಬ್ಬಳ್ಳಿ: ಕರ್ನಾಟಕದ ಮೂವರು ಸೇರಿದಂತೆ ಒಟ್ಟು 66 ಜನ ಸಾಧಕರಿಗೆ ಮೊದಲ ಹಂತದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿಂದು ಪದ್ಮ ಪ್ರಶಸ್ತಿಗಳನ್ನು ಪ್ರಧಾನ ಮಾಡಿದರು.

ಕರ್ನಾಟಕದವರಾದ ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಕಲಾ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು, ಸಮಾಜ ಸೇವೆಯಲ್ಲಿ ಅಂಕೇಗೌಡ ಎಂ. ಮತ್ತು ಡಾ. ಎಸ್. ಜಿ. ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಶತಾವಧಾನಿ ಡಾ. ಆರ್. ಗಣೇಶ್ ಅವರು, ಅವಧಾನ ಕಲೆಯ ಪಂಡಿತರು, ಭಾರತ ಮತ್ತು ವಿದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡುವ ಮೂಲಕ ಪ್ರಾಚೀನ ಸಂಸ್ಕೃತ ಕಲೆಯಾದ ಅಷ್ಟಾವಧಾನವನ್ನು ಪುನಶ್ಚೇತನಗೊಳಿಸಿದ್ದಾರೆ. ಕಲಾ ಕ್ಷೇತ್ರದ ಇವರ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಂಕೇಗೌಡ ಎಂ. ಅವರು, ಪ್ರಸಿದ್ಧ ಪುಸ್ತಕ ಪ್ರೇಮಿ ಮತ್ತು ಜ್ಞಾನ ಪಸರಿಸುತ್ತಿರುವ ಇವರು ತಮ್ಮ ನಿವಾಸದಲ್ಲಿ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಒಳಗೊಂಡ ಬೃಹತ್ ಉಚಿತ ಸಾರ್ವಜನಿಕ ಗ್ರಂಥಾಲಯವನ್ನು ಸ್ವತಃ ನಿರ್ಮಿಸಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ಎಸ್. ಜಿ. ಸುಶೀಲಮ್ಮ ಅವರು, ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಪ್ರಸಿದ್ಧ ಸಮಾಜ ಸೇವಕಿ ಮತ್ತು ಸಂಸ್ಥಾಪಕ ಅಧ್ಯಕ್ಷರು. ಅನಾಥ ಮಕ್ಕಳು, ಸಂಕಷ್ಟದಲ್ಲಿರುವ ಮಹಿಳೆಯರು, ಬುಡಕಟ್ಟು ಸಮುದಾಯಗಳು, ಹಿರಿಯ ನಾಗರಿಕರು ಸೇರಿದಂತೆ ಮುಂತಾದವರ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.