SK Home Ad
Home ಕ್ರೀಡೆ IPL 2026: ಸೂರ್ಯ ಏಕಾಂಗಿ ಹೋರಾಟ ವ್ಯರ್ಥ, ಪ್ಲೇಆಫ್‌ಗೆ RR ಎಂಟ್ರಿ

IPL 2026: ಸೂರ್ಯ ಏಕಾಂಗಿ ಹೋರಾಟ ವ್ಯರ್ಥ, ಪ್ಲೇಆಫ್‌ಗೆ RR ಎಂಟ್ರಿ

0
112

ಮುಂಬೈ: ಮುಂಬೈ ಇಂಡಿಯನ್ಸ್‌ ವಿರುದ್ಧ 30 ರನ್‌ಗಳ ಜಯ ದಾಖಲಿಸುವ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಪ್ಲೇ ಆಫ್‌ ಪ್ರವೇಶಿಸಿದೆ.

ಸೂರ್ಯಕುಮಾರ್‌ ಯಾದವ ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಮುಂಬೈ ಇಂಡಿಯನ್ಸ್‌ ರಾಜಸ್ಥಾನ ರಾಯಲ್ಸ್‌ ವಿರುದ್ಧ 30 ರನ್‌ಗಳ ಸೋಲು ಅನುಭವಿಸಿತು.

ರಾಜಸ್ಥಾನ ನೀಡಿದ್ದ 206 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 175 ರನ್‌ಗಳಿಸಲಷ್ಟೇ ಶಕ್ತವಾಯಿತು.

ಮುಂಬೈ ಆರಂಭಿಕ ಮೊದಲ ಓವರ್‌ನಲ್ಲಿಯೇ ರೋಹಿತ್‌ ಶರ್ಮಾ ಖಾತೆ ತೆರೆಯದೇ ನಿರ್ಗಮಿಸಿದರು. ಅವರ ಹಿಂದೆಯೇ ನಮನ್ ಧೀರ್ (6) ಕೂಡ ಪೆವಿಲಿಯನ್‌ ಸೇರಿದ್ದು ಮುಂಬೈ ಸಂಕಷ್ಟಕ್ಕೆ ಸಿಲುಕಿತು.

ರಯಾನ್ ರಿಕೆಲ್ಟನ್ (12) ಮತ್ತು ತಿಲಕ ವರ್ಮಾ (3) ಕೂಡ ಬಹುಬೇಗನೆ ವಿಕೆಟ್‌ ಒಪ್ಪಿಸಿದರು. ಇದರ ಮಧ್ಯೆ ಸೂರ್ಯಕುಮಾರ ಯಾದವ್‌ ಅವರ ಜತೆಯಾದ ವಿಲ್‌ ಜಾಕ್ಸ್‌ 63 ರನ್‌ಗಳ ಜತೆಯಾಟ ನಡೆಸಿದರು.

ಜಾಕ್ಸ್‌ 18 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ನಿಂದ 33 ರನ್‌ಗಳಿಸಿ ಹೊರನಡೆದರು. ಆಗ ಕ್ರಿಸ್‌ಗೆ ಬಂದ ಹಾರ್ದಿಕ್‌ ಪಾಂಡ್ಯ ಅಬ್ಬರಿಸಲು ಶುರುಮಾಡಿದರಾದರೂ ಬಹಳ ಹೊತ್ತು ಕ್ರಿಸ್‌ನಲ್ಲಿ ನಿಲ್ಲಲಿಲ್ಲ.

ಹಾರ್ದಿಕ್‌ ಪಾಂಡ್ಯ ಕೇವಲ 15 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ನಿಂದ 34 ರನ್‌ಗಳಿಸಿದರು. ಸೂರ್ಯಕುಮಾರ್‌ ಯಾದವ 42 ಎಸೆತದಲ್ಲಿ 3 ಬೌಂಡರಿ, 4 ಸಿಕ್ಸರ್‌ನಿಂದ 60 ರನ್‌ಗಳಿಸಿ ಪಂದ್ಯದಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರ ಎಂದೆನಿಸಿಕೊಂಡರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲ ಫೀಲ್ಡಿಂಗ್‌ ಆಯ್ದುಕೊಂಡ ಮುಂಬೈ ಇಂಡಿಯನ್ಸ್‌ ಲೆಕ್ಕಾಚಾರದಂತೆ ಆರಂಭದಲ್ಲಿಯೇ ರಾಜಸ್ಥಾನ ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕಿತು.

ಸ್ಫೋಟಕ ಆರಂಭವನ್ನು ನೀಡಿದ ಯಶಸ್ವಿ ಜೈಸ್ವಾಲ್‌ 17 ಎಸೆತದಲ್ಲಿ 1 ಬೌಂಡರಿ, 3 ಸಿಕ್ಸರ್‌ನಿಂದ 27 ರನ್‌ ಗಳಿಸಿ ವಿಲ್‌ ಜಾಕ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಇವರ ಹಿಂದೆಯೇ ವೈಭವ್‌ ಸೂರ್ಯವಂಶಿ ಕೇವಲ 4 ರನ್‌ಗಳಿಗೆ ಹೊರನಡೆದರು.

ನಾಯಕ ರಿಯಾನ್‌ ಪರಾಗ್‌ (14) ಕೂಡ ಬಹುಬೇಗನೆ ಪೆವಿಲಿಯನ್‌ ಸೇರಿದರು. 6 ಓವರ್‌ ಆಗುವಷ್ಟರಲ್ಲಿಯೇ ರಾಜಸ್ಥಾನ್‌ 54 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ದಾಸುನ್ ಶನಕ (29) ಮತ್ತು ಧ್ರುವ್ ಜುರೆಲ್ (38) ಜೋಡಿ 45 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಇವರ ಬಳಿಕ ಜೋಫ್ರಾ ಆರ್ಚರ್ ಕೇವಲ 15 ಎಸೆತದಲ್ಲಿ 1 ಬೌಂಡರಿ, 3 ಸಿಕ್ಸರ್‌ ಸೇರಿದಂತೆ 32 ರನ್‌ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಅಂತಿಮವಾಗಿ ರವೀಂದ್ರ ಜಡೇಜಾ ಅಜೇಯ 19, ನಾಂದ್ರೆ ಬರ್ಗರ್ 10 ರನ್‌ ಗಳಿಸಿ ಅಜೇಯರಾಗಿ ಉಳಿದರು.