SK Home Ad
Home ಕ್ರೀಡೆ IPL 2026: ಕೊನೆಯ ಲೀಗ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಕೋಲ್ಕತ್ತಾ

IPL 2026: ಕೊನೆಯ ಲೀಗ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಕೋಲ್ಕತ್ತಾ

0
56

ಕೋಲ್ಕತ್ತಾ: ಐಪಿಎಲ್‌ ಪಂದ್ಯಾವಳಿಯ 70ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ ಟಾಸ್‌ನಲ್ಲಿ ಗೆಲುವು ಸಾಧಿಸಿದೆ.

ಈಡನ್‌ ಗಾರ್ಡನ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೋಲ್ಕತ್ತಾ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದೆ.

ಕೆಕೆಆರ್ ತಂಡವು ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಜಯ ಸಾಧಿಸಿ 13 ಅಂಕಗಳೊಂದಿಗೆ ಪ್ಲೇಆಫ್ ರೇಸ್‌ನಲ್ಲಿ ಜೀವಂತವಾಗಿದೆ. ಸುನೀಲ್ ನರೈನ್ ಮತ್ತು ಮನೀಶ್ ಪಾಂಡೆ ಉತ್ತಮ ಫಾರ್ಮ್‌ಲ್ಲಿದ್ದಾರೆ.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಪ್ಲೇಆಫ್ ತಲುಪುವ ಗಣಿತದ ಲೆಕ್ಕಾಚಾರದಲ್ಲಿ ರೇಸ್‌ನಲ್ಲಿದೆ. ಮಿಚೆಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್ ಹಾಗೂ ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡವು ಕೋಲ್ಕತಾ ಕೋಟೆಯನ್ನು ಭೇದಿಸಲು ಸಜ್ಜಾಗಿದೆ.

ಆರ್‌ಸಿಬಿ, ಗುಜರಾತ್ ಟೈಟನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಈಗಾಗಲೇ ಪ್ಲೇಆಫ್‌ಗೆ ಲಗ್ಗೆ ಇಟ್ಟಿದ್ದು, ಕೊನೆಯ ಒಂದು ಸ್ಥಾನಕ್ಕಾಗಿ ಇಂದು ರಾಜಸ್ಥಾನ್, ಕೆಕೆಆರ್ ಮತ್ತು ಡೆಲ್ಲಿ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಇಂದು ಗೆಲ್ಲುವ ತಂಡಗಳ ನೆಟ್ ರನ್‌ರೇಟ್ ಆಧಾರದ ಮೇಲೆ ನಾಲ್ಕನೇ ಪ್ಲೇಆಫ್ ಸ್ಥಾನ ನಿರ್ಧಾರವಾಗಲಿದೆ. ಒಟ್ಟಾರೆಯಾಗಿ ಇಂದಿನ ಭಾನುವಾರ ಕ್ರಿಕೆಟ್ ಪ್ರೇಮಿಗಳಿಗೆ ರನ್‌ಗಳ ರಸದೌತಣ ಸಿಗುವುದು ಖಚಿತ.