Home Advertisement
Home ಸಿನಿ ಮಿಲ್ಸ್ “ಪಚ್ಚನ ಸಾಮ್ರಾಜ್ಯ” ಅನಾವರಣ: Preludeನಲ್ಲಿ ಮಾಸ್ ಟಚ್

“ಪಚ್ಚನ ಸಾಮ್ರಾಜ್ಯ” ಅನಾವರಣ: Preludeನಲ್ಲಿ ಮಾಸ್ ಟಚ್

0
68

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ‘ಮ್ಯಾಂಗೋ ಪಚ್ಚ’ (Mango Pachcha) ಚಿತ್ರದ ವಿಶೇಷ ತುಣುಕು ‘ಮ್ಯಾಂಗೋ ಪಚ್ಚ ಅ ಪ್ರಿಲ್ಯೂಡ್’ ಇಂದು ಬೆಳಿಗ್ಗೆ 11:11ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಚಿತ್ರತಂಡವು ಈ ಪ್ರಿಲ್ಯೂಡ್ ಅನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ.

ಈ ವಿಶೇಷ ತುಣುಕಿನಲ್ಲಿ 2002ರ ಮೈಸೂರಿನ ಹಿನ್ನೆಲೆಯ ಕಥಾ ಜಗತ್ತನ್ನು ಪರಿಚಯಿಸಲಾಗಿದೆ. “ಪಚ್ಚನ ಸಾಮ್ರಾಜ್ಯ ಮತ್ತು ಅವನ ಸುತ್ತಲಿನ ಜನರ ಪ್ರಪಂಚ” ಎಂಬ ಥೀಮ್‌ನಲ್ಲಿ ಮೂಡಿಬಂದಿರುವ ದೃಶ್ಯಗಳು ಸಿನಿಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿವೆ.

ಪ್ರಿಲ್ಯೂಡ್‌ನಲ್ಲಿ ಕಿಚ್ಚ ಸುದೀಪ್‌ ಅವರ ಹಿನ್ನಲೆ ದ್ವನಿಯಲ್ಲಿ ಮೂಡಿ ಬಂದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾಸ್ ಟಚ್ ಹಾಗೂ ರಾ ಫೀಲ್‌ನೊಂದಿಗೆ ಮೂಡಿಬಂದಿರುವ ಈ ತುಣುಕು ಚಿತ್ರದ ಕಥೆಯ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಚಿತ್ರದಲ್ಲಿ ನಟ ಸಂಚಿತ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ಕಾಜಲ್ ಕುಂದರ್ ಅಭಿನಯಿಸಿದ್ದಾರೆ. ಮೈಸೂರು ಹುಡುಗನ ಬದುಕಿನ ಸುತ್ತ ಹೆಣೆದಿರುವ ಕಥೆಯನ್ನು ಈ ಸಿನಿಮಾ ಹೇಳಲಿದ್ದು, ಸ್ಥಳೀಯ ನೈಜತೆಯೊಂದಿಗೆ ಕಥೆ ಮೂಡಿಬಂದಿರುವ ಸುಳಿವು ಪ್ರಿಲ್ಯೂಡ್‌ನಲ್ಲೇ ಸಿಕ್ಕಿದೆ.

ಈ ಚಿತ್ರವನ್ನು ನವ ನಿರ್ದೇಶಕ ವಿವೇಕ್ ನಿರ್ದೇಶಿಸಿದ್ದು, ಸಂಗೀತವನ್ನು ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಖಡಕ್ ಮಾಲ್’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು.

ಇದೀಗ ಬಿಡುಗಡೆಯಾದ ಪ್ರಿಲ್ಯೂಡ್ ಚಿತ್ರದ ಮಾಸ್ ಎಲಿಮೆಂಟ್‌, ಭಾವನಾತ್ಮಕ ಅಂಶಗಳು ಮತ್ತು ಲೋಕಲ್ ಬ್ಯಾಕ್‌ಡ್ರಾಪ್‌ಗೆ ಮತ್ತಷ್ಟು ಹೈಪ್ ನೀಡಿದೆ. ಚಿತ್ರವು ಜೂನ್ 5, 2026ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದ್ದು, ಯುವ ಸಿನಿಪ್ರೇಕ್ಷಕರಲ್ಲಿ ವಿಶೇಷ ಕುತೂಹಲ ಮೂಡಿಸಿದೆ.