SK Home Ad
Home ಸಿನಿ ಮಿಲ್ಸ್ ಉಸ್ತುವಾರಿಯಾಗಿ ಮೊದಲ ಟಾಸ್ಕ್‌ನಲ್ಲೇ ಗಾನವಿ ಎಡವಟ್ಟು: ಲಕ್ಸುರಿ ಸಾಮಗ್ರಿ ಟಾಸ್ಕ್‌ನಲ್ಲಿ ತಪ್ಪು ತೀರ್ಪು ಕೊಟ್ಟ ಮಹಾರಾಣಿ

ಉಸ್ತುವಾರಿಯಾಗಿ ಮೊದಲ ಟಾಸ್ಕ್‌ನಲ್ಲೇ ಗಾನವಿ ಎಡವಟ್ಟು: ಲಕ್ಸುರಿ ಸಾಮಗ್ರಿ ಟಾಸ್ಕ್‌ನಲ್ಲಿ ತಪ್ಪು ತೀರ್ಪು ಕೊಟ್ಟ ಮಹಾರಾಣಿ

0
31

BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಉಸ್ತುವಾರಿಗಳ ಎಡವಟ್ಟಿನಿಂದ ಟಾಸ್ಕ್‌ಗಳು ರದ್ದಾಗುತ್ತಿರುವ ಸರಣಿ ಮುಂದುವರಿದಿದೆ. ಇದೀಗ ಮಹಾರಾಣಿ ಹಾಗೂ ಕ್ಯಾಪ್ಟನ್ ಪಟ್ಟಕ್ಕೇರಿದ ಬೆನ್ನಲ್ಲೇ ಮೊದಲ ಟಾಸ್ಕ್‌ನ ಉಸ್ತುವಾರಿ ವಹಿಸಿಕೊಂಡಿದ್ದ ಗಾನವಿ ಗೌಡ, ಸರಿಯಾಗಿ ಗಮನಿಸದೆ ತಪ್ಪು ಫಲಿತಾಂಶ ಘೋಷಿಸಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಸೀಸನ್‌ನಲ್ಲಿ ಉಸ್ತುವಾರಿಗಳ ತಪ್ಪಿನಿಂದಲೇ ಹೆಚ್ಚು ಟಾಸ್ಕ್‌ಗಳು ರದ್ದಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ವಾರದ ಲಕ್ಸುರಿ ಸಾಮಗ್ರಿಗಳನ್ನು ಪಡೆಯಲು ನೀಡಿದ್ದ ಟಾಸ್ಕ್‌ಗಾಗಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿತ್ತು. ಒಂದು ತಂಡದಲ್ಲಿ ಆಸಿಯಾ ಫಿರ್ದೋಸ್, ಮಂಜ, ಯಶಸ್ ಕೃಷ್ಣ, ಧನುಷ್ ಹಾಗೂ ಸೌಂದರ್ಯ ಶೆಟ್ಟಿ ಇದ್ದರೆ, ಮತ್ತೊಂದು ತಂಡದಲ್ಲಿ ತಾಂಡವ್ ರಾಮ್, ಗಗನ್ ಚಿನ್ನಪ್ಪ, ಪ್ರಶಾಂತ್, ಕಿರಣ್ ಶಾಸ್ತ್ರಿ ಹಾಗೂ ಜಗದೀಶ್ ಇದ್ದರು. ಬೋರ್ಡ್‌ನಲ್ಲಿರುವ ವಸ್ತುಗಳ ಮೇಲೆ ಗುರಿಯಿಟ್ಟು ಹೊಡೆದು, ಕಾಲುಗಳ ಸಹಾಯದಿಂದ ಬಾಸ್ಕೆಟ್‌ಗೆ ಹಾಕುವ ಸ್ಪರ್ಧೆ ಇದಾಗಿತ್ತು.

ತಾಂಡವ್ ರಾಮ್ ಅವರು ಬಾಲ್ ಮೇಲೆ ಗುರಿಯಿಟ್ಟು ಹೊಡೆಯುವ ಬದಲು ಬೀಟ್‌ರೂಟ್ ಮೇಲೆ ಹೊಡೆದು ಬಾಲ್ ತಂದುಕೊಟ್ಟಿದ್ದಾರೆ. ಆದರೆ, ಬೋರ್ಡ್ ಹಾಗೂ ಆಟವನ್ನು ಸರಿಯಾಗಿ ಗಮನಿಸದ ಗಾನವಿ ಗೌಡ, ತಾಂಡವ್ ತಂಡ ಗೆದ್ದು ಲಕ್ಸುರಿ ಸಾಮಗ್ರಿ ಪಡೆದಿದೆ ಎಂದು ಘೋಷಿಸಿದ್ದಾರೆ. ಇದನ್ನು ಗಮನಿಸಿದ ಆಸಿಯಾ ಬೋರ್ಡ್ ಪರಿಶೀಲಿಸಿ ನಡೆದ ಅನ್ಯಾಯವನ್ನು ಬಯಲಿಗೆಳೆದಿದ್ದಾರೆ.

ತಪ್ಪು ತೀರ್ಪು ನೀಡಿದ ಬಳಿಕ ಗೊಂದಲಕ್ಕೊಳಗಾದ ಗಾನವಿ, ಎರಡು ತಂಡಗಳು ಅರ್ಧಂಬರ್ಧ ಹಂಚಿಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ತಾಂಡವ್ ರಾಮ್ ಗಾನವಿ ವಿರುದ್ಧ ಹರಿಹಾಯ್ದಿದ್ದು, ಟಾಸ್ಕ್ ಫಲಿತಾಂಶದ ವಿಚಾರವಾಗಿ ದೊಡ್ಮನೆಯಲ್ಲಿ ತೀವ್ರ ಗದ್ದಲ ಉಂಟಾಗಿದೆ.