ರಾಜ್ಯದಲ್ಲಿ ಮುಂದಿನ ವರ್ಷ ಎಲ್ ಕೆಜಿ ಯಿಂದ 12 ನೇ ತರಗತಿ ವರೆಗೆ ಉಚಿತ ನೋಟ್ ಬುಕ್ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆಗೆ ಅವಕಾಶ ನೀಡಲಾಗುತ್ತದೆ, ಆದರೆ ಆಂಗ್ಲ ಭಾಷೆ ಕಡ್ಡಾಯವಲ್ಲ ಪೊಷಕರ ಆಯ್ಕೆಯಾಗಿರುತ್ತದೆ. ಶಾಲಾ ಮಕ್ಕಳಿಗೆ ಸಹಾಯಕ್ಕಾಗಿ ಜೂನ್ 01 ರಿಂದ ಕೆಪಿಎಸ್ ಶಾಲಾ ಮಕ್ಕಳಿಗೆ ಉಚಿತ ಬಸ್ ಸೌಲಭ್ಯ ಸಹ ಒದಗಿಸಲಾಗುವುದು.
ಇನ್ನು ಶಾಲಾ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಮತ್ತು ಇನ್ನು 17ಸಾವಿರ ಶಿಕ್ಷಕರ ಹುದ್ದೆಯನ್ನು ಶೀಘ್ರದಲ್ಲೇ ನೇಮಕಾತಿ ಮಾಡಿಕೊಳ್ಳಲಾಗುವುದು, ಇನ್ನು ರಾಜ್ಯಾದ್ಯಂತ 1300ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್ ಸ್ಕೂಲ್ ಸಿದ್ದತೆ ಮಾಡಿಕೊಳ್ಳುಲಾಗಿದೆ ಎಂದು ವಿವರಿಸಿದರು.
ಸರ್ಕಾರಿ ಶಾಲೆಗಳ ಫಲಿತಾಂಶ ಖಾಸಗಿ ಶಾಲೆಗಳಿಗಿಂತ 02% ಹೆಚ್ಚಳವಾಗಿದೆ, ಇನ್ನು ಈ ವರ್ಷ 100% ಫಲಿತಾಂಶ ಬರುವುದಕ್ಕೆ 60 ಪ್ಲಸ್ ಮಿಷನ್ ಅಡಿಯಲ್ಲಿ ಉದ್ದೇಶ ಹೊಂದಲಾಗಿದ್ದು,ರಾಜ್ಯದ ಅನುದಾನಿತ ಶಾಲೆಗಳಲ್ಲಿ 5-6 ಸಾವಿರ ಶಿಕ್ಷಕರ ಮ್ತತು ಪಿಯುಸಿ 36 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.




















