Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ದೇಗುಲದಲ್ಲಿ ಚಪ್ಪಲಿ ಧರಿಸಿದ್ದ ಪುರಾತತ್ವ ಸಿಬ್ಬಂದಿ; ಪ್ರವಾಸಿಗರ ಆಕ್ರೋಶ

ದೇಗುಲದಲ್ಲಿ ಚಪ್ಪಲಿ ಧರಿಸಿದ್ದ ಪುರಾತತ್ವ ಸಿಬ್ಬಂದಿ; ಪ್ರವಾಸಿಗರ ಆಕ್ರೋಶ

0
84

ಬಾಗಲಕೋಟೆ: ಬಾದಾಮಿ ಗುಹಾಂತರ ದೇವಾಲಯದಲ್ಲಿ ಚಪ್ಪಲಿ ಧರಿಸಿ ಕುಳಿತಿದ್ದ ಪುರಾತತ್ವ ಇಲಾಖೆ ಸಿಬ್ಬಂದಿ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಚಪ್ಪಲಿ ಧರಿಸಿ ಕುಳಿತಿದ್ದ ಮುಸ್ಲಿಂ ಸಿಬ್ಬಂದಿಯನ್ನು ‌ಪ್ರವಾಸಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಬಾದಾಮಿ ಗುಹಾಂತರ ದೇವಾಲಯದ ವಿಷ್ಣು ದೇಗುಲದಲ್ಲಿ ಡಿ ದರ್ಜೆ ಸಿಬ್ಬಂದಿ ರೋಷನಿ ಮುಸ್ತಾಕಿ ಚಪ್ಪಲಿ ಧರಿಸಿ ಕುಳಿತಿದ್ದು, ಇದನ್ನು ಗಮನಿಸಿದ ಪ್ರವಾಸಕ್ಕೆ ಆಗಮಿಸಿದ್ದ‌ ಮಹಿಳೆಯೊಬ್ಬರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ‌. ಚಪ್ಪಲಿ ಧರಿಸಿದ್ದ ಸಿಬ್ಬಂದಿ ಆಗ ಮರಳಿ ವಾಗ್ವಾದಕ್ಕೆ ಮುಂದಾಗಿದ್ದು, ಅದರ ವಿಡಿಯೋ ವೈರಲ್ ಆಗಿದೆ.

ನಾವು ದರ್ಗಾ ಪ್ರವೇಶಿಸುವಾಗ ಚಪ್ಪಲಿ ಹಾಕಿ ತೆರಳುತ್ತಿವಾ,‌ ಕೇಳಿ ಪುರಾತತ್ವ ಸಿಬ್ಬಂದಿ ಎನ್ನುತ್ತಾರೆ ಎಂದು ಪ್ರವಾಸಿ‌ ಮಹಿಳೆ‌ ಅಸಮಾಧಾನ ಹೊರಹಾಕಿದ್ದಾರೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೆಗಲ್ಲ ಒತ್ತಾಯಿಸಿದ್ದಾರೆ.