SK Home Ad
Home ಕ್ರೀಡೆ IPL 2026: ಅಯ್ಯರ್‌, ಕೊಹ್ಲಿ ಅಬ್ಬರ; ಪಂಜಾಬ್‌ಗೆ 223 ಗುರಿ

IPL 2026: ಅಯ್ಯರ್‌, ಕೊಹ್ಲಿ ಅಬ್ಬರ; ಪಂಜಾಬ್‌ಗೆ 223 ಗುರಿ

0
183

ಧರ್ಮಶಾಲಾ: ವೆಂಕಟೇಶ ಅಯ್ಯರ್‌ ಮತ್ತು ವಿರಾಟ್‌ ಕೊಹ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪಂಜಾಬ್‌ ಕಿಂಗ್ಸ್‌ ವಿರುದ್ಧ ಬೃಹತ್‌ ರನ್‌ ಕಲೆಹಾಕಿದೆ.

ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 222 ರನ್‌ ಪೇರಿಸಿದೆ.

2.2 ಓವರ್‌ಗಳಲ್ಲಿಯೇ ಆರಂಭಿಕ ಆಟಗಾರ ಜಾಕೋಬ್ ಬೆಥೆಲ್ (11) ವಿಕೆಟ್‌ ಕಳೆದುಕೊಂಡಿತು. ಆದರೆ ಬಳಿಕ ವಿರಾಟ್‌ ಕೊಹ್ಲಿ ಜತೆಗೂಡಿದ ದೇವದತ್ ಪಡಿಕ್ಕಲ್ ಆರಂಭದಲ್ಲಿಯೇ ಪಂಜಾಬ್‌ ಬೌಲರ್‌ಗಳನು ದಂಡಿಸಿಲು ಆರಂಭಿಸಿದರು.

ಈ ಜೋಡಿ 41 ಎಸೆತದಲ್ಲಿ 76 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿತು. ಈ ವೇಳೆ ದೇವದತ್ ಪಡಿಕ್ಕಲ್ 25 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್‌ನಿಂದ 45 ರನ್‌ಗಳಿಸಿ ಹರ್‌ಪ್ರೀತ್ ಬ್ರಾರ್ ಎಸೆತದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಕ್ಯಾಚ್‌ ಕೊಟ್ಟು ಔಟಾದರು.

ಮೂರನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ವೆಂಕಟೇಶ ಅಯ್ಯರ್‌ ಪಂಜಾಬ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಲು ಆರಂಭಿಸಿದರು. ಈ ವೇಳೆ ವಿರಾಟ್‌ ಕೊಹ್ಲಿ 37 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್‌ನಿಂದ 58 ರನ್‌ಗಳಿಸಿ ಹೊರನಡೆದರು.

ಇನ್ನೊಂದು ತುದಿಯಲ್ಲಿ ವೆಂಕಟೇಶ ಅಯ್ಯರ್‌ 40 ಎಸೆತದಲ್ಲಿ 8 ಬೌಂಡರಿ, 4 ಸಿಕ್ಸರ್‌ನಿಂದ 73 ರನ್‌ಗಳಿಸಿ ಅಜೇಯರಾಗಿ ಉಳಿಸರೆ, ಟೀಮ್‌ ಡೇವಿಡ್ 12 ಎಸೆತದಲ್ಲಿ 2 ಬೌಂಡರಿ, 2 ಸಿಕ್ಸರ್‌ನಿಂದ 28 ರನ್‌ಗಳಿಸಿ ಕೊನೆಯ ಎಸೆತದಲ್ಲಿ ಔಟಾದರು.

ಪಂಜಾಬ್‌ ಕಿಂಗ್ಸ್‌ ಪರ ಹರ್‌ಪ್ರೀತ್ ಬ್ರಾರ್ 35ಕ್ಕೆ 2 ವಿಕೆಟ್‌ ಪಡೆದರೆ, ಯಜುವೇಂದ್ರ ಚಾಹಲ್, ಅರ್ಷದೀಪ್‌ ಸಿಂಗ್‌ ತಲಾ ಒಂದು ವಿಕೆಟ್‌ ಪಡೆದರು.