ಧರ್ಮಶಾಲಾ: ಪ್ರಭಸಿಮ್ರನ್ ಸಿಂಗ್ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸವಾಲಿನ ಮೊತ್ತವನ್ನು ಕಲೆಹಾಕಿದೆ.
ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಪಂಜಾಬ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟುಹಾಕುವಲ್ಲಿ ವಿಫಲರಾದರು.
ಪ್ರಭಸಿಮ್ರನ್ ಸಿಂಗ್ ಜತೆ ಪ್ರಿಯಾಂಶ್ ಆರ್ಯ 5.3 ಓವರ್‌ಗಳಲ್ಲಿ 50 ರನ್ ಜತೆಯಾಟ ನಡೆಸಿ ಔಟಾದರು. ಎರಡನೇ ವಿಕೆಟ್ ಕೂಪರ್ ಕೊನೊಲಿ ಜತೆ ಪ್ರಭಸಿಮ್ರನ್ 57 ರನ್‌ಗಳ ಜತೆಯಾಟ ನಡೆಸಿದರು. ಈ ವೇಳೆ 32 ಎಸೆತದಲ್ಲಿ 6 ಬೌಂಡರಿ, 4ಸಿಕ್ಸರ್‌ನಿಂದ 57 ರನ್‌ಗಳಿಸಿ ಶಾರ್ದೂಲ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು.
ಪಂಜಾಬ್ 11.2 ಓವರ್‌ಗಳಲ್ಲಿ 107 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿಯೇ ಇತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಆಟಗಾರನೂ ಉತ್ತಮ ಪ್ರದರ್ಶನ ತೋರದಿರುವುದು ತಂಡದ ಕುಸಿತಕ್ಕೆ ಕಾರಣವಾಯಿತು.
ಇದರ ಮಧ್ಯೆ ಐದನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ಓಮರ್ಜೈ ಕೇವಲ 17 ಎಸೆತದಲ್ಲಿ 2 ಬೌಂಡರಿ, 4 ಸಿಕ್ಸರ್‌ನಿಂದ 38 ರನ್‌ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಮುಂಬೈ ಇಂಡಿಯನ್ಸ್ ಪರ ಶಾರ್ದೂಲ್ ಠಾಕೂರ್ 39ಕ್ಕೆ 4 ವಿಕಟ್ ಉರುಳಿಸಿದರೆ, ದೀಪಕ್ ಚಹಾರ್ 36ಕ್ಕೆ 2 ಪಡೆದರು. ಕಾರ್ಬಿನ್ ಬಾಷ್ ಹಾಗೂ ರಾಜ್ ಬಾವಾ ತಲಾ ಒಂದು ವಿಕೆಟ್ ಪಡೆದರು.























