Home Advertisement
Home ಸುದ್ದಿ ದೇಶ ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ

0
105

ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಯುಡಿಎಫ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಹೊಸ ಮುಖ್ಯಮಂತ್ರಿಯ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ.

ಪಕ್ಷದೊಳಗೆ ನಡೆದ ದೀರ್ಘ ಚರ್ಚೆಯ ಬಳಿಕ ವಿ.ಡಿ. ಸತೀಶನ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಕೆಲ ದಿನಗಳಿಂದ ನಡೆಯಿತ್ತಿದ್ದ ರಾಜಕೀಯ ಪ್ರಹಸನ ಕೊನೆಗೂ ಅಂತ್ಯಗೊಂಡಿದೆ.

ಮೇ 4 ರಂದು ಕೇರಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಭರ್ಜರಿ ಜಯ ಸಾಧಿಸಿತ್ತು. ಅಂದಿನಿಂದ ಶುರುವಾದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರದ ಚರ್ಚೆಗಳು, ಹಲವಾರು ಸಭೆಗಳು, ಲಾಬಿ, ಮಾತುಕತೆಗಳ ಬಳಿಕ ಸದ್ಯ ಉತ್ತರ ದೊರೆತಿದೆ.

ಸಿಎಂ ರೇಸ್‌ನಲ್ಲಿ ವಿ.ಡಿ. ಸತೀಶನ್ ಅವರ ಹೆಸರು ಸೇರಿದಂತೆ ಪ್ರಮುಖ ಇಬ್ಬರ ಹೆಸರು ಹೆಚ್ಚು ಚರ್ಚೆಗೆ ಬಂದಿದ್ದವು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರನ್ನು ಪರಿಗಣಿಸಲಾಗಿತ್ತು. ಸದ್ಯ ಕಾಂಗ್ರೆಸ್ ಹೈಕಮಾಂಡ್ ಅಳೆದುತೂಗಿ ಇದರಲ್ಲಿ ಸತೀಶನ್​ ಅವರನ್ನು ಅಂತಿಮಗೊಳಿಸಿದೆ.