Home Advertisement
Home ನಮ್ಮ ಜಿಲ್ಲೆ ಅಡ್ಡಗೋಡೆ ಮೇಲೆ ದೀಪ; ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸ್ಪಷ್ಟವಾಗಿ ಹೇಳದ ಮೇಯರ್!

ಅಡ್ಡಗೋಡೆ ಮೇಲೆ ದೀಪ; ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸ್ಪಷ್ಟವಾಗಿ ಹೇಳದ ಮೇಯರ್!

0
43

ಬೆಳಗಾವಿ: ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂದು ಪಾಲಿಕೆ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿ ನಿರ್ಣಯ ಕೈಗೊಳ್ಳುವ ಬದಲು, ಮೇಯರ್ ಪ್ರೀತಿ ಕಾಮಕರ್ ಸರ್ಕಾರ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ ಕೇಳುವುದಾಗಿ ರೂಲಿಂಗ್ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕ ಪರ ನಿರ್ಣಯಕ್ಕೆ ಕನ್ನಡ ಪರ ಸದಸ್ಯರು ಒತ್ತಾಯಿಸಿದರೂ, ಮೇಯರ್ ಅವರು ನೇರ ನಿರ್ಧಾರ ಕೈಗೊಳ್ಳದೆ ವಿಷಯವನ್ನು ಸರ್ಕಾರದ ಅಂಗಳಕ್ಕೆ ತಳ್ಳಿದರು. ಬೆಳಗಾವಿ ಕರ್ನಾಟಕದದು ಎಂಬ ಸ್ಪಷ್ಟ ನಿಲುವು ಪಾಲಿಕೆ ಸಭೆಯಿಂದ ಹೊರಬರಬೇಕು ಎಂಬ ಆಗ್ರಹಕ್ಕೆ ಪ್ರತಿಯಾಗಿ, “ಈ ವಿಚಾರ ಚರ್ಚೆಗೆ ಅವಕಾಶ ಇದೆಯೇ? ಸರ್ಕಾರದ ಅಭಿಪ್ರಾಯ ಪಡೆಯಲಾಗುವುದು” ಎಂಬ ನಿಲುವು ತಾಳಲಾಯಿತು.

ಸಭೆಯಲ್ಲಿ ಎಂಇಎಸ್ ಸದಸ್ಯರು ನಿರ್ಣಯ ಕೈಗೊಳ್ಳದಂತೆ ಒತ್ತಾಯಿಸಿದರೆ, ಕನ್ನಡ ಪರ ನಾಮನಿರ್ದೇಶಿತ ಸದಸ್ಯರು ನಿರ್ಣಯದ ಪರವಾಗಿ ಖಡಕ್‌ವಾಗಿ ವಾದಿಸಿದರು. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮೌನ ರಾಜಕೀಯವಾಗಿ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.