Home Advertisement
Home ಸುದ್ದಿ ದೇಶ NEET 2026 Cancelled : ಲಕ್ಷಾಂತರ ವಿದ್ಯಾರ್ಥಿಗಳಿಗೆ ಬಿಗ್ ಶಾಕ್! ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ...

NEET 2026 Cancelled : ಲಕ್ಷಾಂತರ ವಿದ್ಯಾರ್ಥಿಗಳಿಗೆ ಬಿಗ್ ಶಾಕ್! ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಸಿಬಿಐ ತನಿಖೆಗೆ ಆದೇಶ

0
121

NEET 2026 Cancelled: ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ಮೇ 3ರಂದು ನಡೆದಿದ್ದ ಪ್ರತಿಷ್ಠಿತ ‘ನೀಟ್ ಯುಜಿ’ (NEET-UG 2026) ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತವಾಗಿ ರದ್ದುಗೊಳಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಗಂಭೀರ ಅಕ್ರಮಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಸೋರಿಕೆಯಾಗಿದ್ದು ಹೇಗೆ?: ರಾಜಸ್ಥಾನದ ಸೀಕರ್‌ನಲ್ಲಿ ಕೈಬರಹದಲ್ಲಿದ್ದ 140 ಪ್ರಶ್ನೆಗಳಿದ್ದ ‘ಗೆಸ್ ಪೇಪರ್’ ಪರೀಕ್ಷೆಗೂ ಮೊದಲೇ ಹರಿದಾಡುತ್ತಿರುವುದು ಪತ್ತೆಯಾಗಿತ್ತು. ರಾಜಸ್ಥಾನದ ವಿಶೇಷ ಕಾರ್ಯಾಚರಣೆ ಗುಂಪು (SOG) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿದೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ, ಈಗ ಸಂಪೂರ್ಣ ತನಿಖೆಯನ್ನು ಸಿಬಿಐಗೆ (CBI) ಹಸ್ತಾಂತರಿಸಿದೆ. ಈಗಾಗಲೇ ಈ ಜಾಲಕ್ಕೆ ಸಂಬಂಧಿಸಿದಂತೆ 45 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿದಿದೆ.

ಮರು ಪರೀಕ್ಷೆಯ ಮಾಹಿತಿ:

  • ಪರೀಕ್ಷೆ ರದ್ದತಿಯಿಂದ ಆತಂಕಗೊಂಡಿರುವ 22.79 ಲಕ್ಷ ವಿದ್ಯಾರ್ಥಿಗಳಿಗೆ ಎನ್‌ಟಿಎ ಅಭಯ ನೀಡಿದೆ. ರದ್ದಾದ ಪರೀಕ್ಷೆಯನ್ನು ಶೀಘ್ರದಲ್ಲೇ ಮರು ನಿಗದಿಪಡಿಸಲಾಗುವುದು.
  • ವಿದ್ಯಾರ್ಥಿಗಳು ಮರು ಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿಲ್ಲ.
  • ಈ ಹಿಂದೆ ಪಾವತಿಸಿದ್ದ ಶುಲ್ಕವನ್ನು ಮರುಪಾವತಿಸಲಾಗುತ್ತದೆ ಅಥವಾ ಮರು ಪರೀಕ್ಷೆಗೆ ಹೊಂದಿಸಿಕೊಳ್ಳಲಾಗುತ್ತದೆ.
  • ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹಳೆಯ ದಾಖಲಾತಿಗಳೇ ಮಾನ್ಯವಾಗಿರುತ್ತವೆ.

ಸಹಾಯವಾಣಿ ಸಂಪರ್ಕಿಸಿ: ವಿದ್ಯಾರ್ಥಿಗಳ ಗೊಂದಲ ಬಗೆಹರಿಸಲು ಎನ್‌ಟಿಎ ಸಹಾಯವಾಣಿ ತೆರೆದಿದೆ. ವಿದ್ಯಾರ್ಥಿಗಳು 011-40759000 ಅಥವಾ 011-69227700 ಸಂಖ್ಯೆಗೆ ಕರೆ ಮಾಡಬಹುದು ಅಥವಾ neet-ug@nta.ac.in ಇಮೇಲ್ ಮೂಲಕ ಮಾಹಿತಿ ಪಡೆಯಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ವದಂತಿಗಳನ್ನು ನಂಬದೆ ಅಧಿಕೃತ ವೆಬ್‌ಸೈಟ್ ಮಾತ್ರ ಗಮನಿಸುವಂತೆ ಸೂಚಿಸಲಾಗಿದೆ.