Home Advertisement
Home ಕ್ರೀಡೆ IPL 2026: ಇಂಗ್ಲಿಸ್ ಅಬ್ಬರ, ಚೆನ್ನೈಗೆ 204 ಟಾರ್ಗೆಟ್

IPL 2026: ಇಂಗ್ಲಿಸ್ ಅಬ್ಬರ, ಚೆನ್ನೈಗೆ 204 ಟಾರ್ಗೆಟ್

0
84

ಚೆನ್ನೈ: ಜೋಶ್ ಇಂಗ್ಲಿಸ್ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದಾಗಿ ಲಖನೌ ಸೂಪರ್‌ ಜೈಂಟ್ಸ್ ತಂಡ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಸವಾಲಿನ ಮೊತ್ತವನ್ನು ಕಲೆ ಹಾಕಿದೆ.

ಲಖನೌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು. ಲಖನೌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವ ಲೆಕ್ಕಾಚಾರದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಚೆನ್ನೈ ಆರಂಭದಲ್ಲಿ ಜೋಶ್ ಇಂಗ್ಲಿಸ್ ಆರ್ಭಟಕ್ಕೆ ಮಂಕಾಗಿ ಹೋಗಿತ್ತು.

5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 77 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಲಖನೌಗೆ 6ನೇ ಓವರ್‌ನ ಮೊದಲ ಎಸೆತದಲ್ಲಿಯೇ ಅನ್ಶುಲ್ ಕಾಂಬೋಜ್ ಅವರು ಮಿಚೆಲ್ ಮಾರ್ಷ್ (10) ಅವರನ್ನು ಔಟ್‌ ಮಾಡಿದರು.

ಮತ್ತೆ ಮರು ಓವರ್‌ನಲ್ಲಿಯೇ ನಿಕೋಲಸ್ ಪೂರನ್ (1) ಕೂಡ ನೂರ್‌ ಅಹ್ಮದ್‌ ಎಸೆತದಲ್ಲಿ ಸರ್ಫರಾಜ್‌ ಖಾನ್‌ಗೆ ಕ್ಯಾಚ್‌ ನೀಡಿ ಹೊರನಡೆದರು. 15 ರನ್‌ಗಳ ಅಂತರದಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಲಖನೌ ಆಘಾತಕ್ಕೊಳಗಾಯಿತು.

ಇನ್ನೊಂದೆಡೆ ಜೋಶ್ ಇಂಗ್ಲಿಸ್ ಕೇವಲ 33 ಎಸೆತದಲ್ಲಿ 10 ಬೌಂಡರಿ 6 ಸಿಕ್ಸರ್‌ನಿಂದ 85 ರನ್‌ ಗಳಿಸಿ ಆರ್ಭಟಿಸುತ್ತಿದ್ದಾಗ ಜೇಮೀ ಓವರ್ಟನ್ ತಮ್ಮ ಮೊದಲ ಎಸೆತದಲ್ಲಿಯೇ ಅವರನ್ನು ಔಟ್‌ ಮಾಡುವಲ್ಲಿ ಯಶಕಂಡರು.

ಅದೇ ಓವರ್‌ನ ನಾಲ್ಕನೇ ಎಸೆತದಲ್ಲಿಯೂ ಕೂಡ ರಿಷಭ ಪಂತ್‌ ಅವರ ವಿಕೆಟ್‌ ಉರುಳಿಸುವ ಮೂಲಕ ಓವರ್ಟನ್ ಲಖನೌ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು.

ಐಡೆನ್ ಮಾರ್ಕ್ರಾಮ್ (6) ಮತ್ತು ಅಕ್ಷತ್ ರಘುವಂಶಿ (18) ಕೂಡ ಬಹುಬೇಗನೆ ಪೆವಿಲಿಯನ್‌ ಸೇರಿದರು. ಇದರಿಂದಾಗಿ ಲಖನೌ 14.2 ಓವರ್‌ಗಳಲ್ಲಿ 147 ರನ್‌ಗಳಿಗೆ 6 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು.

ಶಹಬಾಜ್ ಅಹಮದ್ ಮತ್ತು ಹಿಮ್ಮತ್ ಸಿಂಗ್ ಜೋಡಿ ಉತ್ತಮ ಜತೆಯಾಟವನ್ನು ನಡೆಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿತು.

ಚೆನ್ನೈ ಪರ ಜೇಮೀ ಓವರ್ಟನ್ 36ಕ್ಕೆ 3, ಅನ್ಶುಲ್ ಕಾಂಬೋಜ್ 41ಕ್ಕೆ 2 ನೂರ್‌ ಅಹ್ಮದ್‌ 24ಕ್ಕೆ 1 ವಿಕೆಟ್‌ ಪಡೆದರು.