Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಪಂಚಮಸಾಲಿ ಪೀಠ: ವಿರೋಧದ ನಡುವೆಯೂ ಲೆಕ್ಕ ಮಂಡಿಸಿದ ಧರ್ಮದರ್ಶಿಗಳು

ಪಂಚಮಸಾಲಿ ಪೀಠ: ವಿರೋಧದ ನಡುವೆಯೂ ಲೆಕ್ಕ ಮಂಡಿಸಿದ ಧರ್ಮದರ್ಶಿಗಳು

0
23
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: 0;weatherinfo: null;temperature: 43;

ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಟ್ರಸ್ಟ್‌ನ ಲೆಕ್ಕಪತ್ರ ಮಂಡನೆಗೆ ಶ್ರೀವಚನಾನಂದ ಸ್ವಾಮೀಜಿ ಪರ ಇರುವ ಭಕ್ತರು ವಿರೋಧ ವ್ಯಕ್ತಪಡಿಸಿದ ನಡುವೆಯೇ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಲೆಕ್ಕಪತ್ರ ಮಂಡಿಸಿದರು.

ನಗರದ ಹೊರವಲಯದಲ್ಲಿರುವ ಮಠದ ಆವರಣದಲ್ಲಿ ಸೋಮವಾರ 2008ರಿಂದ 2026ರವರೆಗೆ ಪಂಚಮಸಾಲಿ ಜಗದ್ಗುರು ಪೀಠದ ಟ್ರಸ್ಟಿಗಳಿಂದ ಲೆಕ್ಕ ಕೊಡುವ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ 11ಗಂಟೆಗೆ ನಿಗದಿಯಾಗಿದ್ದ ಲೆಕ್ಕಕೊಡುವ ಕಾರ್ಯಕ್ರಮ ತಡವಾಗಿ ಆರಂಭವಾಯಿತು. ಕಾವೇರಿದ ವಾತಾವರಣದ ನಡುವೆಯೂ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಸತತವಾಗಿ ಮೂರ್ನಾಲ್ಕು ಗಂಟೆ ಸುದೀರ್ಘವಾಗಿ 2008ರಿಂದ 2026ರವರೆಗೆ ಪೀಠಕ್ಕೆ ದೇಣಿಗೆ ರೂಪದಲ್ಲಿ ಬಂದಿದ್ದ ದೇಣಿಗೆ, ಧವಸ, ಧಾನ್ಯ, ನಿವೇಶನ, ಜಮೀನು ಸೇರಿದಂತೆ ಆಸ್ತಿ ಪತ್ರಗಳನ್ನು ಭಕ್ತರ ಮುಂದೆ ಒಪ್ಪಿಸಿದರು.

18 ವರ್ಷಗಳಲ್ಲಿ ಮಠಕ್ಕೆ ದೇಣಿಗೆ ರೂಪದಲ್ಲಿ ಒಟ್ಟು 27,61,57,518 ರೂ.ಗಳು ಬಂದಿದ್ದು, ಅಷ್ಟೂ ಹಣವನ್ನು ಮಠದ ಆವರಣದಲ್ಲಿ ದೇವಸ್ಥಾನ, ಗುರುಧ್ಯಾನ ಮಂದಿರ, ದಾಸೋಹ ಭವನ ನಿರ್ಮಾಣ, ಮಠದ ಸ್ಥಳದಲ್ಲಿ ಮಣ್ಣು ತುಂಬಿ ಸಮತಟ್ಟು ಮಾಡಲು, ಹರಜಾತ್ರೆ, ಶ್ರೀಗಳ ಪೀಠಾರೋಹಣ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಅನ್ನದಾಸೋಹ ಸೇರಿದಂತೆ ವಿವಿಧ ಧರ್ಮ ಕಾರ್ಯಗಳಿಗೆ ಖರ್ಚು ಮಾಡಲಾಗಿದೆ. 1.68 ಕೋಟಿ ರೂ. ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ ಎಂದು ಪ್ರತಿಯೊಂದು ಲೆಕ್ಕವನ್ನೂ ವಿವರಿಸಿದರು.

ಸರ್ಕಾರದಿಂದ 12.70 ಕೋಟಿ ರೂ., ಮರಳು ಮಾರಾಟದಿಂದ 10 ಲಕ್ಷ ರೂ., ಸಂಡೂರು ನಾಗನಗೌಡ 2 ಕೋಟಿ ರೂ., ಬಸವರಾಜ ಬೊಮ್ಮಾಯಿ 15 ಲಕ್ಷ, ದೇವಸ್ಥಾನ ನಿರ್ಮಾಣಕ್ಕೆ ಶಾಮನೂರು ಶಿವಶಂಕರಪ್ಪ 1 ಕೋಟಿ ರೂ. ನೀಡಿರುವುದು ಸೇರಿದಂತೆ ಒಟ್ಟು 27 ಕೋಟಿ ರೂ. ಹಣ ಸಂಗ್ರಹವಾಗಿತ್ತು ಎಂದು ಮಾಹಿತಿ ನೀಡಿದರು.