Home Advertisement
Home ಸಿನಿ ಮಿಲ್ಸ್ Toxic ವಿವಾದಗಳಿಗೆ ಬ್ರೇಕ್: ಹಾಲಿವುಡ್ ವೇದಿಕೆಯಲ್ಲಿ ಅಸಲಿ ಗುಟ್ಟು ಬಿಚ್ಚಿಟ್ಟ ಯಶ್!

Toxic ವಿವಾದಗಳಿಗೆ ಬ್ರೇಕ್: ಹಾಲಿವುಡ್ ವೇದಿಕೆಯಲ್ಲಿ ಅಸಲಿ ಗುಟ್ಟು ಬಿಚ್ಚಿಟ್ಟ ಯಶ್!

0
49

Toxic: ಕೆಜಿಎಫ್ ಸರಣಿಯ ಭಾರಿ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾದಾಗ, ಅದರಲ್ಲಿನ ಕೆಲವು ಬೋಲ್ಡ್ ದೃಶ್ಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದವು.

ಇದೀಗ ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ ‘ಸಿನಿಮಾಕಾನ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಶ್, ಈ ಎಲ್ಲಾ ವಿವಾದ ಹಾಗೂ ಟೀಕೆಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ.

ಮಹಿಳಾ ದೃಷ್ಟಿಕೋನದ ಗ್ಯಾಂಗ್ಸ್ಟರ್ ಕಥೆ!: ಚಿತ್ರದಲ್ಲಿನ ರೊಮ್ಯಾಂಟಿಕ್ ಹಾಗೂ ಬೋಲ್ಡ್ ದೃಶ್ಯಗಳ ಬಗ್ಗೆ ಮಾತನಾಡಿದ ಯಶ್, ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಭಾರತೀಯ ಚಿತ್ರರಂಗದಲ್ಲಿ ಆ್ಯಕ್ಷನ್ ಹಾಗೂ ಗ್ಯಾಂಗ್‌ಸ್ಟರ್ ಸಿನಿಮಾಗಳನ್ನು ಸಾಮಾನ್ಯವಾಗಿ ಪುರುಷ ನಿರ್ದೇಶಕರು ಮಾತ್ರ ನಿರ್ದೇಶಿಸುತ್ತಾರೆ. ಆದರೆ, ಒಬ್ಬ ಮಹಿಳಾ ನಿರ್ದೇಶಕಿ ಗ್ಯಾಂಗ್‌ಸ್ಟರ್ ಕಥೆಯನ್ನು ಹೆಣ್ಣಿನ ದೃಷ್ಟಿಕೋನದಿಂದ ಹೇಳಹೊರಟಿರುವುದು ನಿಜಕ್ಕೂ ಅದ್ಭುತ. ಪ್ರೀತಿ, ಪ್ರಣಯ ಹಾಗೂ ಭಾವನೆಗಳನ್ನು ಒಬ್ಬ ಮಹಿಳೆ ಎಷ್ಟು ಆಳವಾಗಿ ಮತ್ತು ವಿಭಿನ್ನವಾಗಿ ತೋರಿಸಬಲ್ಲಳು ಎಂಬುದನ್ನು ನಾನು ಈ ಚಿತ್ರದ ಜರ್ನಿಯಲ್ಲಿ ಕಲಿತುಕೊಂಡೆ” ಎಂದು ಯಶ್ ಹೇಳಿದ್ದಾರೆ. ಇದು ಕೇವಲ ರಕ್ತಪಾತದ ಸಿನಿಮಾವಲ್ಲ, ಬದಲಾಗಿ ಭಾವನೆಗಳ ಆಳವಿರುವ ವಿಭಿನ್ನ ಚಿತ್ರ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.:

ವಿವಾದಗಳ ನಡುವೆಯೂ ಭಾರಿ ನಿರೀಕ್ಷೆ: ‘ಟಾಕ್ಸಿಕ್’ ಚಿತ್ರವು ತನ್ನ ಶೀರ್ಷಿಕೆಗೆ ತಕ್ಕಂತೆಯೇ ಕೆಲವು ವಿವಾದಗಳನ್ನೂ ಎದುರಿಸುತ್ತಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ‘ಇಂಟ್ರಡ್ಯೂಸಿಂಗ್ ರಾಯಾ’ ವಿಡಿಯೋದಲ್ಲಿ ಸ್ಮಶಾನ, ಕಾರ್ ಮತ್ತು ಬಾಂಬ್ ಇರುವ ದೃಶ್ಯವೊಂದು ಪ್ರಸಾರವಾಗಿತ್ತು. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ರಾಷ್ಟ್ರೀಯ ಕ್ರಿಶ್ಚಿಯನ್ ಫೆಡರೇಷನ್ ದೂರು ದಾಖಲಿಸಿತ್ತು. ಆದಾಗ್ಯೂ, ಯಶ್ ಸ್ಟೈಲಿಶ್ ಲುಕ್ ಮತ್ತು ಹಾಲಿವುಡ್ ಮಟ್ಟದ ಮೇಕಿಂಗ್ ಈ ಸಣ್ಣಪುಟ್ಟ ವಿವಾದಗಳನ್ನು ಮೀರಿ ನಿಂತಿದೆ.

ಮೊದಲು ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’, ತಾಂತ್ರಿಕ ಕಾರಣಗಳು ಹಾಗೂ ಅದ್ಧೂರಿ ಗ್ರಾಫಿಕ್ಸ್ ಕೆಲಸಗಳ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು. ಇದೀಗ ಎಲ್ಲಾ ಅಡೆತಡೆಗಳನ್ನು ದಾಟಿ, ಭಾರಿ ನಿರೀಕ್ಷೆಯೊಂದಿಗೆ ಇದೇ ಜೂನ್ 4ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲು ಸಜ್ಜಾಗಿದೆ. ರಾಕಿ ಭಾಯ್ ಹೊಸ ಅವತಾರವನ್ನು ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಇರುವ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.