Home Advertisement
Home ನಮ್ಮ ಜಿಲ್ಲೆ IPL ವಿವಾದ: ಹರ್ಭಜನ್ ಕಪಾಳಮೋಕ್ಷದಿಂದ 1 ಕೋಟಿ ಗಳಿಕೆ; ಶ್ರೀಶಾಂತ್ ಸ್ಫೋಟಕ ಹೇಳಿಕೆ!

IPL ವಿವಾದ: ಹರ್ಭಜನ್ ಕಪಾಳಮೋಕ್ಷದಿಂದ 1 ಕೋಟಿ ಗಳಿಕೆ; ಶ್ರೀಶಾಂತ್ ಸ್ಫೋಟಕ ಹೇಳಿಕೆ!

0
37

2008ರ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ನಡೆದ ಕುಖ್ಯಾತ ‘ಸ್ಲ್ಯಾಪ್‌ಗೇಟ್’ (ಕಪಾಳಮೋಕ್ಷ) ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಟೀಮ್ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್, ಹರ್ಭಜನ್ ಸಿಂಗ್ ವಿರುದ್ಧ ಹಣಕಾಸಿನ ಲಾಭ ಹಾಗೂ ಸ್ನೇಹದ ನಾಟಕದ ಕುರಿತು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ.

ಅಂದಿನ ಆ ಕಪಾಳಮೋಕ್ಷದ ಘಟನೆಯನ್ನು ಆಧರಿಸಿದ ಇತ್ತೀಚಿನ ಜಾಹೀರಾತಿನಿಂದ ಹರ್ಭಜನ್ ಸಿಂಗ್ ಸುಮಾರು 80 ಲಕ್ಷದಿಂದ 1 ಕೋಟಿ ರೂಪಾಯಿ ಗಳಿಸಿದ್ದಾರೆ ಎಂದು ಶ್ರೀಶಾಂತ್ ಆರೋಪಿಸಿದ್ದಾರೆ. ಹರ್ಭಜನ್ ಆ ಜಾಹೀರಾತನ್ನು ಹಂಚಿಕೊಳ್ಳುವಂತೆ ತನಗೆ ಕೇಳಿದಾಗ ಅಸಮಾಧಾನಗೊಂಡಿರುವುದಾಗಿ ತಿಳಿಸಿದ್ದರು.

“ಕ್ಷಮಿಸುತ್ತೇನೆ, ಮರೆಯುವುದಿಲ್ಲ”: “ನಾನು ಹರ್ಭಜನ್‌ನ್ನು ಕ್ಷಮಿಸಬಹುದು, ಆದ್ರೆ ಆ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಶ್ರೀಶಾಂತ್ ಮಲಯಾಳಂ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸಂಬಂಧ ಕಡಿತ: ಹರ್ಭಜನ್ ಜೊತೆಗಿನ ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲಾಕ್ ಮಾಡಿರುವುದಾಗಿ ಶ್ರೀಶಾಂತ್ ಬಹಿರಂಗಪಡಿಸಿದ್ದಾರೆ. ಹರ್ಭಜನ್ ಸಾರ್ವಜನಿಕವಾಗಿ ತೋರಿಸಿಕೊಳ್ಳುವ ಸ್ನೇಹ ಕೇವಲ ಇಮೇಜ್ ಕಾಪಾಡಿಕೊಳ್ಳುವ ತಂತ್ರ ಎಂದು ದೂರಿದ್ದಾರೆ.

ಹೌದು.. ಈ ಎಲ್ಲ ವಿವಾದಗಳ ಕೇವಲ ಒಂದು ಪಂದ್ಯದಿಂದ ಆರಂಭವಾಗಿತ್ತು. ಇದು 2008ರಲ್ಲಿ ಮುಂಬೈ ಮತ್ತು ಪಂಜಾಬ್ ನಡುವಿನ ಪಂದ್ಯದ ನಂತರ ಹರ್ಭಜನ್, ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದರು. ಇದರಿಂದಾಗಿ ಭಜ್ಜಿ ಅಮಾನತುಗೊಂಡಿದ್ದರು. ಆದ್ರೆ ಇದೀಗ “18 ವರ್ಷಗಳ ನಂತರವೂ ಈ ವಿವಾದ ಮತ್ತೆ ಚರ್ಚೆಗೆ ಬಂದಿರುವುದು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಹರ್ಭಜನ್ ಸಿಂಗ್ ಇಮೇಜ್ ಬಿಲ್ಡಿಂಗ್ ಮಾಡುತ್ತಿದ್ದಾರೆ ಹೊರತು ನಿಜವಾಗಿ ಬದಲಾಗಿಲ್ಲ ಎಂಬುದು ಶ್ರೀಶಾಂತ್ ವಾದವಾಗಿದೆ.”

ಸದ್ಯ ಶ್ರೀಶಾಂತ್ ಈ ಗಂಭೀರ ಆರೋಪಗಳಿಗೆ ಹರ್ಭಜನ್ ಸಿಂಗ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಈ ಬೆಳವಣಿಗೆಯಿಂದ ಹಳೆಯ ಗಾಯಗಳು ಮತ್ತೆ ಹಸಿಯಾಗಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: north/https://samyuktakarnataka.in/news/karnataka/karnataka-weather-report-sun-showers-in-the-north/