Home Advertisement
Home ಕೃಷಿ/ವಾಣಿಜ್ಯ ರೈತರಿಗೆ ಸಿಹಿ ಸುದ್ದಿ: ಕೃಷಿ ಕ್ಷೇತ್ರಕ್ಕೆ ಬೂಸ್ಟ್ – ಖಾರಿಫ್ ಸಬ್ಸಿಡಿ ಹೆಚ್ಚಳ

ರೈತರಿಗೆ ಸಿಹಿ ಸುದ್ದಿ: ಕೃಷಿ ಕ್ಷೇತ್ರಕ್ಕೆ ಬೂಸ್ಟ್ – ಖಾರಿಫ್ ಸಬ್ಸಿಡಿ ಹೆಚ್ಚಳ

0
79

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 2026ರ ಖಾರಿಫ್ ಹಂಗಾಮಿಗೆ ಸಂಬಂಧಿಸಿದಂತೆ ರೈತರಿಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (P&K) ರಸಗೊಬ್ಬರಗಳ ಮೇಲಿನ ಪೋಷಕಾಂಶ ಆಧಾರಿತ ಸಬ್ಸಿಡಿ (NBS) ದರಗಳಿಗೆ ಅನುಮೋದನೆ ನೀಡಲಾಗಿದೆ.

2026ರ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಅನ್ವಯವಾಗುವ ಈ ಯೋಜನೆಗೆ ಸುಮಾರು ₹41,533.81 ಕೋಟಿ ರೂ.ಗಳ ಬಜೆಟ್ ಮೀಸಲಿಡಲಾಗಿದೆ. ಇದು ಕಳೆದ ವರ್ಷದ ₹37,216.15 ಕೋಟಿ ರೂ.ಗಳಿಗಿಂತ ಸುಮಾರು ₹4,317 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.

ರೈತರಿಗೆ ಲಾಭವೇನು? : ಈ ನಿರ್ಧಾರದಿಂದ ರೈತರಿಗೆ ರಸಗೊಬ್ಬರಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ, ಕೃಷಿ ವೆಚ್ಚ ಕಡಿಮೆಯಾಗಲು ಸಹಾಯವಾಗಲಿದೆ. ಮತ್ತು ಉತ್ಪಾದನೆ ಹೆಚ್ಚಿಸಲು ಉತ್ತೇಜನ ಸಿಗಲಿದೆ ಹಾಗೆ ಮಾರುಕಟ್ಟೆ ಬೆಲೆ ಏರಿಕೆಯಿಂದ ರೈತರಿಗೆ ಆಗುವ ಹೊರೆ ಕಡಿಮೆಯಾಗಲಿದೆ. DAP, NPKS ಸೇರಿದಂತೆ ವಿವಿಧ P&K ರಸಗೊಬ್ಬರಗಳಿಗೆ ಸಬ್ಸಿಡಿ ಅನ್ವಯವಾಗಲಿದೆ.

ಸಬ್ಸಿಡಿ ಏಕೆ ಹೆಚ್ಚಳ? : ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಏರಿಕೆ, ಕಚ್ಚಾ ವಸ್ತುಗಳ (inputs) ಬೆಲೆ ಏರಿಕೆ, ಜಾಗತಿಕ ಸರಬರಾಜು ಸರಪಳಿಯಲ್ಲಿ ವ್ಯತ್ಯಯ ಈ ಎಲ್ಲಾ ಕಾರಣಗಳಿಂದ ಸರ್ಕಾರ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲು ಮುಂದಾಗಿದೆ.

ಅನುಷ್ಠಾನ ಮತ್ತು ಯೋಜನೆ: ಸರ್ಕಾರವು ರಸಗೊಬ್ಬರ ತಯಾರಕರು ಮತ್ತು ಆಮದುದಾರರ ಮೂಲಕ ಸಬ್ಸಿಡಿ ಒದಗಿಸುತ್ತದೆ. ರೈತರಿಗೆ ನೇರವಾಗಿ ಕಡಿಮೆ ದರದಲ್ಲಿ ರಸಗೊಬ್ಬರ ಲಭ್ಯವಾಗುವಂತೆ ನೋಡಿಕೊಳ್ಳುತ್ತದೆ. 2010ರಿಂದ ಜಾರಿಯಲ್ಲಿರುವ NBS ಯೋಜನೆಯಡಿಯಲ್ಲಿ ದರಗಳನ್ನು ನಿರ್ಧರಿಸುತ್ತದೆ

ಈ ಕ್ರಮದಿಂದ ಕೃಷಿ ಕ್ಷೇತ್ರದಲ್ಲಿ ಸ್ಥಿರತೆ ತರಲು ಸರ್ಕಾರ ಉದ್ದೇಶಿಸಿದೆ.