ಸ್ಯಾಂಡಲ್‌ವುಡ್ ಸಾನ್ವಿಯಾಗಿ ಮಿಂಚಿದ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ಅಂಗಳದಲ್ಲಿ ನ್ಯಾಷನಲ್ ಕ್ರಶ್ ಆಗಿ ಸಾಕಷ್ಟು ಸದ್ದು ಮಾಡ್ತಿದ್ದಾರೆ. ರಶ್ಮಿಕಾ ಅವರಿಗೆ ಈ ವರ್ಷದ ಹುಟ್ಟು ಹಬ್ಬ ತುಂಬಾ ವಿಶೇಷವಾಗಿತ್ತು. ಯಾಕೆ ಎಂದರೆ ಹುಟ್ಟು ಹಬ್ಬದ ನಿಮಿತ್ತ ವಿರಾಜಪೇಟೆ ನಗರದ ʻಸೆರೆನಿಟಿ ಹಾಲ್ʼನಲ್ಲಿ ಅದ್ಧೂರಿ ಡಿನ್ನರ್ ಪಾರ್ಟಿ ಆಯೋಜಿಸಲಾಗಿತ್ತು. ಈ ಸಂತಸದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.
ಇನ್ನು ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿರೊಶ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಬಳಿಕ ಹೈದರಾಬಾದ್‌ನಲ್ಲಿ ಭವ್ಯವಾದ ಆರತಕ್ಷತೆ ನಡೆಯಿತು. ಮದುವೆಯ ನಂತರ ಮೊದಲ ಬಾರಿಗೆ ಕೊಡಗಿಗೆ ಭೇಟಿ ನೀಡಿದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರಿಗಾಗಿ ವಿರಾಜಪೇಟೆಯ ‘ಸೆರೆನಿಟಿ ಹಾಲ್’ನಲ್ಲಿ ವಿಶೇಷ ಡಿನ್ನರ್ ಪಾರ್ಟಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು, ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರು ಭಾಗವಹಿಸಿ ಸಂಭ್ರಮವನ್ನು ಹೆಚ್ಚಿಸಿದರು.
ಇದೇ ಸಂದರ್ಭದಲ್ಲಿ ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ಆರತಕ್ಷತೆ ನಡೆಸುವ ಉದ್ದೇಶವೂ ಈ ಕಾರ್ಯಕ್ರಮದಲ್ಲೇ ನೆರವೇರಿತು. ಬಂಧು ಬಳಗ ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಿ ಸರಳವಾಗಿಯೇ ಔತಣವನ್ನು ಆಯೋಜಿಸಲಾಯಿತು. ಇದರ ಮಧ್ಯೆ, ತಮ್ಮ ಹುಟ್ಟುಹಬ್ಬವನ್ನು ಕೂಡ ರಶ್ಮಿಕಾ ಅದ್ಧೂರಿಯಾಗಿ ಆಚರಿಸಿಕೊಂಡರು. ಈ ವಿಶೇಷ ದಿನದಲ್ಲಿ ಅವರ ತಂದೆ ಮದನ್ ಮಂದಣ್ಣ ಕೊಡಗಿನಲ್ಲಿ ಒಂದು ವೈಭವದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದರು.
ಹುಟ್ಟುಹಬ್ಬದ ಸಂಭ್ರಮದಲ್ಲಿ ರಶ್ಮಿಕಾ ಕೊಡಗಿನ ಸಾಂಪ್ರದಾಯಿಕ ಉಡುಪಿನಲ್ಲಿ, ಕೊಡವ ಶೈಲಿಯ ಸೀರೆಯಲ್ಲಿ ಸಕತ್ ಮಿಂಚಿದ್ದಾರೆ






















