ಬಾಗಲಕೋಟೆ: ರಾಜ್ಯಾದ್ಯಂತ ಆಟೋ ಎಲ್‌ಪಿಜಿ (LPG) ಅಭಾವ ತಲೆದೋರಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿದ “ಗ್ಯಾಸ್ ಇಲ್ಲದಿದ್ದರೆ ಪೆಟ್ರೋಲ್ ಬಳಸಿ” ಎಂಬ ಸಲಹೆಯು ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಈ ಹೇಳಿಕೆಯನ್ನು ಕೆಪಿಸಿಸಿ ತೀವ್ರವಾಗಿ ಖಂಡಿಸಿದ್ದು, ಕೇಂದ್ರ ಸಚಿವರ ವಿರುದ್ಧ 3 ಪ್ರಶ್ನೆಗಳನ್ನು ಮುಂದಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಚಿವ ಪ್ರಲ್ಹಾದ್ ಜೋಶಿ, “ರಾಜ್ಯದಲ್ಲಿ ಆಟೋ ಗ್ಯಾಸ್‌ಗೆ ಸ್ವಲ್ಪ ಸಮಸ್ಯೆ ಆಗಿರಬಹುದು, ಆದ್ರೆ ಸಂಪೂರ್ಣ ಕೊರತೆ ಇನ್ನೂ ಆಗಿಲ್ಲ. ಖಾಸಗಿ ಕೇಂದ್ರಗಳು ಅನಿಲವನ್ನು ಆಮದು ಮಾಡಿಕೊಳ್ಳುತ್ತಿವೆ. ಹಾಗೇ ಪರಿಸ್ಥಿತಿಯು ಸರಿಯಾಗುವವರೆಗೆ ಆಟೋ ಚಾಲಕರು ತಾತ್ಕಾಲಿಕವಾಗಿ ಪೆಟ್ರೋಲ್ ಬಳಕೆಗೆ ಬದಲಾಯಿಸಿಕೊಳ್ಳುವುದು ಉತ್ತಮ” ಎಂದು ತಿಳಿಸಿದ್ದರು.
ಇದಕ್ಕೆ ಕೆಪಿಸಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆ ಕಾಂಗ್ರೆಸ್ ಎತ್ತಿರುವ 3 ಪ್ರಮುಖ ಪ್ರಶ್ನೆಗಳಿಗೆ
ಸಚಿವರ ಈ ಹೇಳಿಕೆಯನ್ನು ನೀಡಿದ್ದು ಜನರನ್ನ ಕೇರಳಿಸುವಂತೆ ಮಾಡಿದ್ದು, ಅಲ್ಲದೇ.. “ಬಡವರ ವಿರೋಧಿ” ಎಂದು ಕರೆದಿರುವ ಕೆಪಿಸಿಸಿ ವಕ್ತಾರ ಎ.ಎನ್. ನಟರಾಜ್ ಗೌಡ, ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದಾರೆ.
ಆರ್ಥಿಕ ವಾಸ್ತವತೆ ಎಲ್ಲಿ ಹೋಯಿತು?: ಗ್ಯಾಸ್‌ಗೆ ಹೋಲಿಸಿದರೆ ಪೆಟ್ರೋಲ್ ಬೆಲೆ ದುಪ್ಪಟ್ಟಾಗಿದೆ. ದುಬಾರಿ ಪೆಟ್ರೋಲ್ ಬಳಸಿ ಆಟೋ ಓಡಿಸಿದರೆ ಬಡ ಚಾಲಕನಿಗೆ ದಿನದ ಕೊನೆಯಲ್ಲಿ ಲಾಭ ಸಿಗುವುದಾದರೂ ಹೇಗೆ? ಅವನ ಸಂಸಾರದ ಹೊಟ್ಟೆ ತುಂಬುವವರು ಯಾರು? ಎಂದು ಪ್ರಶ್ನೆಯನ್ನು ಹಾಕಿದ್ದಾರೆ.
ತಾಂತ್ರಿಕ ಅಜ್ಞಾನದ ಪರಮಾವಧಿ: ಲಕ್ಷಾಂತರ ಆಟೋಗಳು ಕೇವಲ ಗ್ಯಾಸ್ ಆಧಾರಿತ ಎಂಜಿನ್ (Dedicated LPG) ಹೊಂದಿವೆ. ಅವುಗಳಲ್ಲಿ ಪೆಟ್ರೋಲ್ ಬಳಸುವ ವ್ಯವಸ್ಥೆಯೇ ಇರುವುದಿಲ್ಲ. ಇಂತಹ ಕನಿಷ್ಠ ಜ್ಞಾನವೂ ಸಚಿವರಿಗಿಲ್ಲವೇ?
ಜವಾಬ್ದಾರಿಯಿಂದ ಜಾರಿಕೊಳ್ಳುವುದು: ಇಂಧನ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ. ಅಂತರಾಷ್ಟ್ರೀಯ ಬಿಕ್ಕಟ್ಟಿನ ನೆಪ ಹೇಳಿ ಖಾಸಗಿ ಕಂಪನಿಗಳ ಕೃತಕ ಅಭಾವವನ್ನು ಮುಚ್ಚಿಡುವುದು ಸರಿಯಲ್ಲ, ಎಂದು ವ್ಯಂಗವಾಡಿದ್ದಾರೆ.
ಹಾಗೇ ಸಚಿವರ ನಡೆಯನ್ನು ಗಮನಿಸಿದರೆ ಫ್ರೆಂಚ್ ಕ್ರಾಂತಿಯ ಕಾಲ ಮರಳಿದಂತೆ ಕಾಣಿಸುತ್ತೆ. “ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಿ” ಎಂಬ ಕುಖ್ಯಾತ ಹೇಳಿಕೆಗೆ ಹೋಲಿಸಿದ ಕಾಂಗ್ರೆಸ್, ಇದು ಸರ್ಕಾರದ ಅಹಂಕಾರವನ್ನು ಪ್ರದರ್ಶಿಸುತ್ತದೆ ಎಂದು ವ್ಯಂಗ್ಯವಾಡಿದೆ. ಕೃತಕ ಅಭಾವ ಸೃಷ್ಟಿಸಿರುವ ಖಾಸಗಿ ಕಂಪನಿಗಳ ಮೇಲೆ ನಿಯಂತ್ರಣ ಸಾಧಿಸದ ಕೇಂದ್ರ ಸರ್ಕಾರ, ಬಡವರ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿದೆ.
ಕೆಪಿಸಿಸಿ ವಕ್ತಾರರ ಒತ್ತಾಯ: ಈ ಕೂಡಲೇ ಸಚಿವರು ಕ್ಷಮೆಯಾಚಿಸಬೇಕು ಮತ್ತು ಸಮರೋಪಾದಿಯಲ್ಲಿ ಎಲ್‌ಪಿಜಿ ಪೂರೈಕೆಯನ್ನು ಸಹಜ ಸ್ಥಿತಿಗೆ ತರಬೇಕು ಎಂದು ಕಾರ್ಮಿಕ ವರ್ಗದ ಪರವಾಗಿ ವಕ್ತಾರ ಎ.ಎನ್. ನಟರಾಜ್ ಗೌಡ ಆಗ್ರಹಿಸಿದ್ದಾರೆ.






















