Home Advertisement
Home ಸಿನಿ ಮಿಲ್ಸ್ ‘ಅಮೃತಧಾರೆ’ ಜೋಡಿಯ ಅಪ್ಪಟ ಪ್ರೀತಿ: ವೈವಾಹಿಕ ಬದುಕಿಗೆ ಸಜ್ಜಾದ ರಾಣವ್-ರಾಧಾ!

‘ಅಮೃತಧಾರೆ’ ಜೋಡಿಯ ಅಪ್ಪಟ ಪ್ರೀತಿ: ವೈವಾಹಿಕ ಬದುಕಿಗೆ ಸಜ್ಜಾದ ರಾಣವ್-ರಾಧಾ!

0
57

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ಯ ಮೂಲಕ ಮನೆಮಾತಾಗಿದ್ದ ಜೆಡಿ ಮತ್ತು ಮಲ್ಲಿ ಜೋಡಿ ಇದೀಗ ನಿಜಜೀವನದಲ್ಲೂ ಒಂದಾಗುತ್ತಿದ್ದಾರೆ. ನಟ ರಾಣವ್ ಗೌಡ ಹಾಗೂ ನಟಿ ರಾಧಾ ಭಗವತಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಈ ಬೆನ್ನಲ್ಲೇ ತಮ್ಮ ಪ್ರೀತಿ, ಜಾತಿ ಮತ್ತು ಆಹಾರ ಪದ್ಧತಿಯ ಬಗ್ಗೆ ರಾಣವ್ ಗೌಡ ಹಂಚಿಕೊಂಡಿರುವ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

ಹೌದು.. ರಾಣವ್‌ ಮತ್ತು ರಾಧಾ ಇಬ್ಬರು ಬೇರೆ ಬೇರೆ ಜಾತಿಯಾದರು, ಇವರುಗಳ ಮನಸ್ಸು ಒಂದಾಗಿವೆ. ಹಾಗೇ ಪರಿಶುದ್ಧ ಪ್ರೀತಿಯ ಮುಂದೆ ಯಾವ ಜಾತಿ-ಭೇದಭಾವನು ಇಲ್ಲ ಎಂದು ಈ ಜೋಡಿಗಳು ಸಾಬೀತು ಮಾಡಿವೆ. ಹಾಗೇ ಇವರ ಆಹಾರ ಪದ್ಧತಿಯು ಅದೇ ರೀತಿಯಾಗಿ ಸಂಪೂರ್ಣ ಬದಲಾಗಿದ್ದೆ ಇದರ ಬಗ್ಗೆ ಸವಿವರವಾಗಿ ಈ ಪ್ರೀತಿಯ ಹಕ್ಕಿಗಳು ಉತ್ತರಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ರಾಣವ್ ಗೌಡ, ಸಮಾಜದಲ್ಲಿ ಚರ್ಚೆಯಾಗುತ್ತಿರುವ ವೆಜ್ ಮತ್ತು ನಾನ್-ವೆಜ್ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. “ನಾನು ಗೌಡ್ರು, ರಾಧಾ ಭಗವತಿ ಲಿಂಗಾಯತರು. ನಮ್ಮ ನಡುವೆ ಆಹಾರ ಪದ್ಧತಿಯ ವ್ಯತ್ಯಾಸವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಮನುಷ್ಯನ ಮೂಲವನ್ನು ಹುಡುಕುತ್ತಾ ಹೋದರೆ ನಾವೆಲ್ಲರೂ ಆದಿಮಾನವರ ಸಂತಾನ. ಅಂದು ಎಲ್ಲರೂ ಬೇಟೆಯಾಡಿ ನಾನ್-ವೆಜ್ ತಿನ್ನುತ್ತಿದ್ದವರೇ ಅಲ್ವೇ?” ಎಂದು ಪ್ರಶ್ನಿಸುವ ಮೂಲಕ ಜಾತಿ ಮತ್ತು ಆಹಾರದ ಕಟ್ಟಳೆಗಳಿಗಿಂತ ಮನುಷ್ಯತ್ವ ಮತ್ತು ಪ್ರೀತಿ ದೊಡ್ಡದು ಎಂಬ ಸಂದೇಶ ನೀಡಿದ್ದಾರೆ.

ಅಲ್ಲದೇ.. ರಾಧಾ ಭಗವತಿ ಶುದ್ಧ ಸಸ್ಯಾಹಾರಿ (Pure Veg) ಹಾಗೂ ರಾಣವ್ ಗೌಡ ಮಾಂಸಾಹಾರಿ (Non-Veg). ಈ ವ್ಯತಿರಿಕ್ತ ಆಹಾರ ಪದ್ಧತಿಯ ನಡುವೆಯೂ ಇಬ್ಬರ ಮಧ್ಯ ಗಾಢವಾದ ಪ್ರೀತಿ ಚಿಗುರಿದೆ. ವಿಶೇಷವೆಂದರೆ, ರಾಧಾ ಭಗವತಿ ಚಿಕನ್ ಮತ್ತು ಮಟನ್ ಅಡುಗೆಯನ್ನು ಬಹಳ ಸೊಗಸಾಗಿ ಮಾಡುತ್ತಾರೆ ಎಂದು ರಾಣವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಅವರು ನಾನ್-ವೆಜ್ ಅಡುಗೆ ಚೆನ್ನಾಗಿ ಮಾಡ್ತಾರೆ, ಆದ್ರೆ ಅದಕ್ಕಿಂತ ಹೆಚ್ಚಾಗಿ ರಾಧಾ ಮಾಡುವ ಪುಳಿಯೋಗರೆ ಅಂದ್ರೆ ನನಗೆ ಪಂಚಪ್ರಾಣ” ಎಂದು ರಾಣವ್ ತಮ್ಮ ಭಾವಿ ಪತ್ನಿಯ ಕೈರುಚಿಯನ್ನು ನೆನೆದು ಕೊಂಡಾಡಿದರು.

ಈಗಾಗಲೇ ಈ ಜೋಡಿಯ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದೆ. ನಂತರ ಒಳ್ಳಯ ಮೂರ್ಹೂತದಲ್ಲಿ ರಾಣವ್ ಮತ್ತು ರಾಧಾ ಹಸೆಮಣೆ ಏರಲಿದ್ದಾರೆ. ‘ಅಮೃತಧಾರೆ’ಯಲ್ಲಿ ಜೆಡಿ-ಮಲ್ಲಿಯಾಗಿ ಪ್ರೇಕ್ಷಕರನ್ನು ರಂಜಿಸಿದ್ದ ಈ ಜೋಡಿ, ಇದೀಗ ರಿಯಲ್ ಲೈಫ್‌ನಲ್ಲಿ ಪತಿ-ಪತ್ನಿಯಾಗುತ್ತಿರುವುದಕ್ಕೆ ಅಭಿಮಾನಿಗಳು ಹರಸುತ್ತಿದ್ದಾರೆ. ಸದ್ಯ ರಾಧಾ ಭಗವತಿ ‘ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿಯಲ್ಲಿ ಲಾಯರ್‌ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನ ಎರಡರನ್ನು ಸಮನಾಗಿ ಸಂಭ್ರಮಿಸುತ್ತಿದ್ದಾರೆ.