Home Advertisement
Home ಕ್ರೀಡೆ IPL 2026: ರಾಜಸ್ಥಾನ ರಾಯಲ್ಸ್‌ಗೆ 128 ರನ್‌ಗಳ ಸಾಧಾರಣ ಗುರಿ

IPL 2026: ರಾಜಸ್ಥಾನ ರಾಯಲ್ಸ್‌ಗೆ 128 ರನ್‌ಗಳ ಸಾಧಾರಣ ಗುರಿ

0
87

ಗುವಾಹಟಿ: ರಾಜಸ್ಥಾನ ರಾಯಲ್ಸ್‌ ಉತ್ತಮ ಬೌಲಿಂಗ್‌ ಪ್ರದರ್ಶನದ ಮಧ್ಯೆಯೂ ಜೇಮೀ ಓವರ್ಟನ್ ಅವರ ತಾಳ್ಮೆಯುತ ಬ್ಯಾಟಿಂಗ್‌ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ರಾಜಸ್ಥಾನ ವಿರುದ್ಧ 127 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದೆ.

ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 19.4 ಓವರ್‌ಗಳಲ್ಲಿ 127 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಆರಂಭದಿಂದಲೂ ಚೆನ್ನೈ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ರಾಜಸ್ಥಾನ ಬೌಲರ್‌ಗಳು ರನ್‌ ಗಳಿಸಲು ಪರದಾಡುವಂತೆ ಮಾಡಿದರು. ಮೊದಲ ನಾಲ್ವರು ಆಟಗಾರರನ್ನು ಎರಡಂಕಿಯ ರನ್‌ ಗಳಿಸಲು ಬಿಡದೆ ಪೆವಿಲಿಯನ್‌ ಸೇರಿಸಿದರು.

ಸರ್ಫರಾಜ್ ಖಾನ್ (17), ಕಾರ್ತಿಕ್ ಶರ್ಮಾ (18) ಮತ್ತು ಜೇಮೀ ಓವರ್ಟನ್ (43) ಬಿಟ್ಟರೆ ಉಳಿದ ಯಾವೊಬ್ಬ ಆಟಗಾರನೂ ಕೂಡ ಎರಡಂಕಿಯ ರನ್‌ ಗಳಿಸದಿರುವುದು ಸಿಎಸ್‌ಕೆಗೆ ಹಿನ್ನಡೆಯಾಯಿತು.

ರಾಜಸ್ಥಾನ ತಂಡದ ಪರ ಬೌಲಿಂಗ್‌ ಮಾಡಿದ ಆರು ಜನರು ವಿಕೆಟ್‌ ಉರುಳಿಸಿದ್ದು ಮೂವರು ತಲಾ ಎರಡು ವಿಕೆಟ್‌ ಪಡೆದರೆ, ಇನ್ನುಳಿದ ಮೂವರು ತಲಾ ಒಂದು ವಿಕೆಟ್‌ ಪಡೆದರು.