ಹೈದರಾಬಾದ್: ತೆಲಂಗಾಣ ಸರ್ಕಾರ ಉದ್ಯೋಗದಲ್ಲಿರುವ ಮಕ್ಕಳಿಂದ ಹೆತ್ತವರು ನಿರ್ಲಕ್ಷಕ್ಕೆ ಒಳಗಾದರೆ ಅವರಿಗೆ ಆರ್ಥಿಕ ಸಹಾಯ ನೀಡುವ ಬಗ್ಗೆ ಹೊಸ ಮಸೂದೆಯನ್ನು ಶನಿವಾರ ಸದನದಲ್ಲಿ ಮಂಡಿಸಿದೆ.
ತೆಲಂಗಾಣ ನೌಕರರ ಜವಾಬ್ದಾರಿ ಮತ್ತು ಪೋಷಕರ ಬೆಂಬಲದ ಮೇಲ್ವಿಚಾರಣೆ ಹೆಸರಿನ ಮಸೂದೆಯನ್ನು ರಾಜ್ಯ ಹಿಂದುಳಿದ ವರ್ಗ ಮತ್ತು ಹಿರಿಯ ನಾಗರಿಕರ ಕಲ್ಯಾಣ ಸಚಿವ ಅಡ್ಲೂರಿ ಲಕ್ಷ್ಮಣ್ ಮಂಡಿಸಿದ್ದು, ಈ ಮಸೂದೆಯ ಪ್ರಕಾರ ಮಕ್ಕಳು ತಮ್ಮ ಹಿರಿಯ ಪೋಷಕರನ್ನು ಕಡೆಗಣಿಸಿದರೆ ಅವರ ಸಂಬಳದ ಖಾತೆಯಿಂದ ಶೇ. 15ರಷ್ಟು ಅಥವಾ 10 ಸಾವಿರ ರೂಪಾಯಿ ಪೋಷಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ.





















