Home Advertisement
Home ನಮ್ಮ ಜಿಲ್ಲೆ ಬಳ್ಳಾರಿ ಜಿಹಾದಿ ನಂಟು: ಆಂಧ್ರ ಪೊಲೀಸರಿಂದ ಬಳ್ಳಾರಿ ಯುವಕನ ಬಂಧನ

ಜಿಹಾದಿ ನಂಟು: ಆಂಧ್ರ ಪೊಲೀಸರಿಂದ ಬಳ್ಳಾರಿ ಯುವಕನ ಬಂಧನ

0
222

ಬಳ್ಳಾರಿ: ಬಳ್ಳಾರಿ ನಗರದಲ್ಲಿ ಉಗ್ರ ಸಿದ್ಧಾಂತಗಳ ಪ್ರಚಾರ ಹಾಗೂ ನಿಷೇಧಿತ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಯುವಕನನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತನನ್ನು ಕೌಲಬಜಾರ್ ಪ್ರದೇಶದ ಅಬ್ದುಲ್ ಸಲಾಮ್ ಎಂದು ಗುರುತಿಸಲಾಗಿದೆ. ಆನ್‌ಲೈನ್ ಮೂಲಕ ಮೂಲಭೂತವಾದಿ (extremist) ಚಿಂತನೆಗಳನ್ನು ಹರಡುತ್ತಿದ್ದಾನೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಖಚಿತ ಸುಳಿವು ಪಡೆದ ಆಂಧ್ರ ಪ್ರದೇಶದ ಪೊಲೀಸರು ಬಳ್ಳಾರಿಗೆ ಬಂದು, ನಗರದಲ್ಲಿನ ದಾರ್ ದ ಮಿಲ್ ಪ್ರದೇಶದ ಬಳಿ ಆರೋಪಿಯನ್ನು ಹಿಂಬಾಲಿಸಿ ಬಂಧಿಸಿದ್ದಾರೆ. ಬಳಿಕ ಅವನ ನಿವಾಸದಲ್ಲಿ ಪಂಚನಾಮೆ ನಡೆಸಿ, ಡಿಜಿಟಲ್ ಸಾಧನಗಳು ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತನನ್ನು ಹೆಚ್ಚಿನ ವಿಚಾರಣೆಗೆ ವಿಜಯವಾಡಗೆ ಕರೆದೊಯ್ಯಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯವಾಡದಲ್ಲಿ ಇನ್ನೂ ಕೆಲ ಯುವಕರನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಾಥಮಿಕ ತನಿಖೆಯಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಚಿಂತನೆಗಳನ್ನು ಹರಡುವ ಜಾಲದೊಂದಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಆ ಸಂಪರ್ಕಗಳ ಕುರಿತು ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ.