Home Advertisement
Home ನಮ್ಮ ಜಿಲ್ಲೆ ಶಿವಮೊಗ್ಗ ‘ಬ್ಯಾಂಕ್ ಅಧಿಕಾರಿ’ ಸೋಗಿನಲ್ಲಿ 3 ಲಕ್ಷ ರೂ. ವಂಚನೆ..!

‘ಬ್ಯಾಂಕ್ ಅಧಿಕಾರಿ’ ಸೋಗಿನಲ್ಲಿ 3 ಲಕ್ಷ ರೂ. ವಂಚನೆ..!

0
20

ಶಿವಮೊಗ್ಗ: ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಕ್ರೆಡಿಟ್ ಕಾರ್ಡ್‌ನಿಂದ ಕಡಿತವಾಗಲಿರುವ ವಿಮಾ ಹಣವನ್ನು ತಡೆಯುವುದಾಗಿ ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಲಕ್ಷಕ್ಕೂ ಅಧಿಕ ಮೊತ್ತದ ಹಣ ವಂಚನೆ ಮಾಡಲಾಗಿದೆ.

ಕರೆ ಮಾಡಿ, ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ಇನ್ಶೂರೆನ್ಸ್ ಹಣ ಕಡಿತವಾಗುತ್ತಿದೆ. ಅದನ್ನು ನಾವು ರದ್ದುಗೊಳಿಸಿ ನಿಮ್ಮ ಹಣ ಉಳಿಸಿಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಇದನ್ನು ನಂಬಿದ ಸಂತ್ರಸ್ತರು ವಂಚಕರ ಜಾಲಕ್ಕೆ ಬಿದ್ದಿದ್ದಾರೆ.

ವಂಚಕರು ನೀಡಿದ ಸೂಚನೆಯಂತೆ ಸಂತ್ರಸ್ತರು ತಮ್ಮ ಮೊಬೈಲ್‌ನಲ್ಲಿ ಒಂದು ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ಆಪ್‌ನಲ್ಲಿ ತಮ್ಮ ಬಳಿಯಿದ್ದ ಮೂರು ಪ್ರತ್ಯೇಕ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ವಂಚಕರು ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.

ತಮ್ಮ ಕ್ರೆಡಿಟ್ ಕಾರ್ಡ್‌ಗಳಿಂದ ಒಟ್ಟು 3,06,261 ರೂಪಾಯಿ ಕಡಿತವಾಗಿರುವ ಮೆಸೇಜ್ ಬಂದಾಗ ವ್ಯಕ್ತಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಕೂಡಲೇ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.