ಬೆಳಗಾವಿ: ಈಜುಗೊಳದಲ್ಲಿ ಈಜುತ್ತಿದ್ದಾಗಲೇ ಹೃದಯಾಘಾತದಿಂದ ಸೇನಾಧಿಕಾರಿ ಸಾವನ್ನಪ್ಪಿದ ಘಟನೆ ಬೆಳಗಾವಿಯ ನಾನಾವಾಡಿಯ ಕಮಾಂಡೋ ವಿಂಗ್ ಆವರಣದಲ್ಲಿ ಮುಂಜಾನೆ ನಡೆದಿದೆ.
ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜುತ್ತಿದ್ದ ಹರಿಯಾಣ ಮೂಲದ ಲೆಫ್ಟಿನೆಂಟ್ ಅಮಿತ್‌ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಳಗಾವಿಯ ಎಂಎಲ್‌ಐಆರ್‌ಸಿ ಕಮಾಂಡೋ ವಿಂಗ್‌ನ ಟ್ರೇನಿಂಗ್‌ನಲ್ಲಿ ಅಧಿಕಾರಿಯಾಗಿದ್ದರು.
ಈಜುತ್ತಿದ್ದಾಗಲೇ ಏಕಾಏಕಿ ತೀವ್ರ ಹೃದಯಾಘಾತವಾಗಿದೆ. ತಕ್ಷಣ ಅಧಿಕಾರಿಯನ್ನು ಮೇಲಕ್ಕೆ ತಂದು ಲೈಫ್ ಗಾರ್ಡ್ ಪ್ರದೀಪ್ ಕುಮಾರ್ ಪ್ರಥಮ ಚಿಕಿತ್ಸೆ ನೀಡಿ ಅಂಬುಲೆನ್ಸ್ ಮೂಲಕ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಒಯ್ಯುವಾಗ ಮಾರ್ಗಮಧ್ಯದಲ್ಲೇ ಲೆಫ್ಟಿನೆಂಟ್ ಅಮಿತ್ ಸಿಂಗ್ ಸಾವನ್ನಪ್ಪಿದ್ದಾರೆ.
ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.























