Home Advertisement
Home ಕ್ರೀಡೆ ಇಂಟರ್ ಕಾಶಿ Vs ಬೆಂಗಳೂರು ಎಫ್‌ಸಿ; ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ!

ಇಂಟರ್ ಕಾಶಿ Vs ಬೆಂಗಳೂರು ಎಫ್‌ಸಿ; ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ!

0
5

ಬೆಂಗಳೂರು, ಮಾರ್ಚ್ 21, 2026: ಬೆಂಗಳೂರು ಎಫ್‌ಸಿ ತಂಡವು ಮತ್ತೆ ‘ಸಿಟಿ ಆಫ್ ಜಾಯ್’ ಖ್ಯಾತಿಯ ಕೋಲ್ಕತ್ತಾಗೆ ಮರಳಿದ್ದು, ಮಾರ್ಚ್ 22ರ ಭಾನುವಾರ ಸಂಜೆ 7:30ಕ್ಕೆ ಕಿಶೋರ್ ಭಾರತಿ ಕ್ರೀಡಾಂಗಣದಲ್ಲಿ ಇಂಟರ್ ಕಾಶಿ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮೋಹನ್ ಬಗಾನ್ ಸೂಪರ್ ಜೈಂಟ್ ವಿರುದ್ಧ ನಡೆದ ರೋಚಕ ಪಂದ್ಯವನ್ನು 0-0 ಗೋಲುಗಳಿಂದ ಡ್ರಾ ಮಾಡಿಕೊಂಡಿರುವ ಹುರುಪಿನಲ್ಲಿ ‘ಬ್ಲೂಸ್’ ಪಡೆ ಕಣಕ್ಕಿಳಿಯುತ್ತಿದೆ.

ರೆನೆಡಿ ಸಿಂಗ್ ಮಾರ್ಗದರ್ಶನದ ಬೆಂಗಳೂರು ತಂಡವು ಕಳೆದ ವಾರ ಅದ್ಭುತ ಪ್ರತಿರೋಧ ತೋರುವ ಮೂಲಕ, ಮೋಹನ್ ಬಗಾನ್ ತಂಡದ ಸತತ ನಾಲ್ಕು ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತ್ತು.

ನಾಳೆ ಅವರು ನಮ್ಮ ವಿರುದ್ಧ ಪೂರ್ಣ ಶಕ್ತಿಯೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಏಕೆಂದರೆ ಅವರು ಗೋವಾ ಮತ್ತು ಮುಂಬೈ ವಿರುದ್ಧವೂ ಕಠಿಣ ಹೋರಾಟ ನೀಡಿದ್ದರು. ಆದರೆ ನಾವು ಉತ್ತಮವಾಗಿ ಸಿದ್ಧತೆ ನಡೆಸಿದ್ದೇವೆ ಮತ್ತು ಸವಾಲಿಗೆ ಸಜ್ಜಾಗಿದ್ದೇವೆ,” ಎಂದು ರೆನೆಡಿ ಸಿಂಗ್ ಹೇಳಿದ್ದಾರೆ.

ಇಂಟರ್ ಕಾಶಿ ತಂಡದ ಕೋಚ್ ಆಂಟೋನಿಯೊ ಲೋಪೆಜ್ ಹಬಾಸ್ ಅವರಿಗೆ ಐಎಸ್‌ಎಲ್ ಹೊಸದಲ್ಲ. ಅವರು 2014 ಮತ್ತು 2019 ರಲ್ಲಿ ಎಟಿಕೆ ಮತ್ತು ಎಟಿಕೆ ಮೋಹನ್ ಬಗಾನ್ ತಂಡಗಳೊಂದಿಗೆ ಪ್ರಶಸ್ತಿ ಗೆದ್ದ ಅನುಭವ ಹೊಂದಿದ್ದಾರೆ. ಸದ್ಯ ಐದು ಪಂದ್ಯಗಳಿಂದ ಐದು ಅಂಕ ಗಳಿಸಿರುವ ಇಂಟರ್ ಕಾಶಿ ಎಂಟನೇ ಸ್ಥಾನದಲ್ಲಿದ್ದರೆ, ಎಂಟು ಅಂಕಗಳನ್ನು ಹೊಂದಿರುವ ಬೆಂಗಳೂರು ಆರನೇ ಸ್ಥಾನದಲ್ಲಿದೆ.

ಮುಂದಿನ ಪಂದ್ಯಗಳ ಸಿದ್ಧತೆಯ ಬಗ್ಗೆ ಮಾತನಾಡಿದ ಡಿಫೆಂಡರ್ ರಿಕ್ಕಿ ಮೀಟಿ, “ನಾನು ಎಲ್ಲಾ ಪಂದ್ಯಗಳಿಗೂ ಉತ್ತಮವಾಗಿ ತಯಾರಿ ನಡೆಸುತ್ತಿದ್ದೇನೆ. ಹೌದು, ಮುಂದಿನ ಪಂದ್ಯವೂ ಕಠಿಣವಾಗಿರುತ್ತದೆ. ಆದರೆ ಕೋಚ್‌ಗೆ ನನ್ನ ಅಗತ್ಯವಿದ್ದಾಗ ನಾನು ತಂಡಕ್ಕಾಗಿ ಆಡಲು ಸದಾ ಸಿದ್ಧ,” ಎಂದಿದ್ದಾರೆ.