Home Advertisement
Home ಸಿನಿ ಮಿಲ್ಸ್ `ಧುರಂಧರ್’ ನೋಡಿದರೆ ಸಮಯ, ಹಣ ವ್ಯರ್ಥ: ರಮ್ಯಾ

`ಧುರಂಧರ್’ ನೋಡಿದರೆ ಸಮಯ, ಹಣ ವ್ಯರ್ಥ: ರಮ್ಯಾ

0
4

ಬೆಂಗಳೂರು: ಚಿತ್ರಮಂದಿರದಲ್ಲಿ ತಾಳ್ಮೆಯ ಪರೀಕ್ಷೆ ಹೇಗೆ ಮಾಡಬೇಕು ಎಂಬುದಕ್ಕೆ `ಧುರಂಧರ್-2′ ಉತ್ತಮ ಉದಾಹರಣೆ ಎಂದು ನಟಿ ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

`ಈ ಚಿತ್ರ ವೀಕ್ಷಿಸುವಾಗ ನಿಮ್ಮ ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡಿಕೊಳ್ಳಬೇಡಿ. ಸ್ವಲ್ಪ ದಿನ ಕಾದು ಓಟಿಟಿಯಲ್ಲಿ ಚಿತ್ರ ವೀಕ್ಷಿಸುವುದು ಉತ್ತಮ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್ ಮಾಡಿದ್ದಾರೆ.

`ಥಿಯೇಟರ್‌ನಲ್ಲಿದ್ದ ಎಲ್ಲರಲ್ಲೂ ಬೇಸರ ಎದ್ದು ಕಾಣುತಿತ್ತು. ಸಿನಿಮಾದಲ್ಲಿ ಹಿಂಸೆ ವಿಜೃಂಭಿಸಿದೆ. ಕೈಗೆ ಸಿಕ್ಕ ಪ್ರತಿಯೊಂದು ವಸ್ತುವನ್ನು ಹೇಗೆ ಮಾರಕಾಸ್ತ್ರವಾಗಿ ಬಳಸಿ ಹಿಂಸೆ ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ. ನಿರ್ದೇಶಕರು ತಮ್ಮ ಜೊತೆಯೇ ಪೈಪೋಟಿಗಿಳಿದಂತಿದೆ. ಆ ದೃಶ್ಯಗಳನ್ನು ನೋಡಿ ಆಘಾತವಾಗುವ ಬದಲು ನಗು ಬರುತ್ತದೆ’ ಎಂದು ರಮ್ಯಾ ಬರೆದುಕೊಂಡಿದ್ದಾರೆ.