Home Advertisement
Home ನಮ್ಮ ಜಿಲ್ಲೆ ಧಾರವಾಡ ಯುಗಾದಿ-ರಂಜಾನ್ ಸ್ಪೆಷಲ್: ಹುಬ್ಬಳ್ಳಿ–ಬೆಂಗಳೂರು ನಡುವೆ ಹೆಚ್ಚುವರಿ ರೈಲು

ಯುಗಾದಿ-ರಂಜಾನ್ ಸ್ಪೆಷಲ್: ಹುಬ್ಬಳ್ಳಿ–ಬೆಂಗಳೂರು ನಡುವೆ ಹೆಚ್ಚುವರಿ ರೈಲು

0
96

ಹುಬ್ಬಳ್ಳಿ: ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ನೈಋತ್ಯ ರೈಲ್ವೆ (South Western Railway) ವತಿಯಿಂದ ಹುಬ್ಬಳ್ಳಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (SMVT) ಬೆಂಗಳೂರು ನಡುವೆ ವಿಶೇಷ ರೈಲು ಸೇವೆ ಘೋಷಿಸಲಾಗಿದೆ.

ವಿಶೇಷ ರೈಲು ವಿವರಗಳು

ಹುಬ್ಬಳ್ಳಿ → ಬೆಂಗಳೂರು (Train No. 07311), ದಿನಾಂಕ: ಮಾರ್ಚ್ 22, 2026 (ಭಾನುವಾರ), ಹೊರಡುವ ಸಮಯ: ಸಂಜೆ 6:15 (ಹುಬ್ಬಳ್ಳಿ), ತಲುಪುವ ಸಮಯ: ಬೆಳಗ್ಗೆ 9:00 (ಬೆಂಗಳೂರು – SMVT), ಮಾರ್ಗ: ಕೊಪ್ಪಳ → ಹೊಸಪೇಟೆ → ಬಳ್ಳಾರಿ → ಚಿತ್ರದುರ್ಗ

ಬೆಂಗಳೂರು → ಹುಬ್ಬಳ್ಳಿ (Train No. 07312), ದಿನಾಂಕ: ಮಾರ್ಚ್ 23, 2026 (ಸೋಮವಾರ), ಹೊರಡುವ ಸಮಯ: ಬೆಳಗ್ಗೆ 10:00 (ಬೆಂಗಳೂರು – SMVT), ತಲುಪುವ ಸಮಯ: ಸಂಜೆ 7:40 (ಹುಬ್ಬಳ್ಳಿ), ಮಾರ್ಗ: ಅರಸಿಕೇರಿ → ದಾವಣಗೇರಿ

ರೈಲಿನ ವೈಶಿಷ್ಟ್ಯ: ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಒಟ್ಟು 19 ಎಲ್‌ಎಚ್‌ಬಿ (LHB) ಬೋಗಿಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಗಮ ಪ್ರಯಾಣ ಅನುಭವ ಒದಗಿಸಲು ಸಿದ್ಧವಾಗಿದೆ.

ಹಬ್ಬದ ಹಿನ್ನೆಲೆ ವಿಶೇಷ ಎಕ್ಸ್‌ಪ್ರೆಸ್ ರೈಲು: ಯುಗಾದಿ ಹಾಗೂ ರಂಜಾನ್ ಹಬ್ಬದ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜನರು ತಮ್ಮ ಊರುಗಳಿಗೆ ಪ್ರಯಾಣಿಸುವುದು ಹೆಚ್ಚಾಗುತ್ತದೆ. ಇದರಿಂದ ರೈಲುಗಳಲ್ಲಿ ಭಾರಿ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ, ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸುವ ಮೂಲಕ ಪ್ರಯಾಣಿಕರ ಅನುಕೂಲತೆ ಹೆಚ್ಚಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.