Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಬಾಗಲಕೋಟೆ ಉಪಚುನಾವಣೆ: ಸಿಎಂಗೆ ಎರಡು ಹೆಸರು ಶಿಫಾರಸ್ಸು ಮಾಡಿದ ಉಸ್ತುವಾರಿ ತಂಡ

ಬಾಗಲಕೋಟೆ ಉಪಚುನಾವಣೆ: ಸಿಎಂಗೆ ಎರಡು ಹೆಸರು ಶಿಫಾರಸ್ಸು ಮಾಡಿದ ಉಸ್ತುವಾರಿ ತಂಡ

0
135

ಬಾಗಲಕೋಟೆ: ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ ನೇತೃತ್ವದ ಚುನಾವಣಾ ಉಸ್ತುವಾರಿ ತಂಡವು ಮಂಗಳವಾರ ಸಂಜೆ ಬಾಗಲಕೋಟೆ ಉಪಚುನಾವಣೆ ಕುರಿತಾಗಿ ಬೆಂಗಳೂರಿನಲ್ಲಿ ಸಭೆಯನ್ನು ನಡೆಸಿ ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ.

ಸಚಿವರಾದ ಸತೀಶ ಜಾರಕಿಹೊಳಿ, ಶಿವರಾಜ ತಂಗಡಗಿ, ಶಿವಾನಂದ ಪಾಟೀಲ, ಆರ್.ಬಿ. ತಿಮ್ಮಾಪೂರ, ಶಾಸಕರಾದ ಸಿ.ಎಸ್. ನಾಡಗೌಡ, ವಿಪ ಸದಸ್ಯರಾದ ಎಫ್.ಎಚ್. ಜಕ್ಕಪ್ಪನವರ, ಬಸನಗೌಡ ಬಾದರ್ಲಿ, ಮಾಜಿ ಎಂಎಲ್‌ಸಿ ಸೋಮಣ್ಣ ಬೇವಿನಮರದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಸೇರಿ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲೂ ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ ಇಬ್ಬರ ಹೆಸರುಗಳು ಚರ್ಚೆ ಆಗಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೂ ಇದೇ ಎರಡು ಹೆಸರುಗಳನ್ನು ತಂಡ ಶಿಫಾರಸ್ಸು ಮಾಡಿದೆ. ಮುಖ್ಯಮಂತ್ರಿಗಳನ್ನು ಸಮಿತಿ ಭೇಟಿ ಮಾಡಿದ ವೇಳೆ ಮಾಜಿ ಸಚಿವ ಅಜಯಕುಮಾರ ಸರನಾಯಕ, ಬಿಟಿಡಿಎ ನಿಯೋಜಿತ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಇದ್ದರು.

ಬುಧವಾರ ಬೆಳಗ್ಗೆ ಮೇಟಿ ಕುಟುಂಬಸ್ಥರ ಜತೆಗೆ ಸಿಎಂ ಚರ್ಚೆ ಮಾಡಿದ ನಂತರ ಒಂದು ಹೆಸರನ್ನು ಹೈಕಮಾಂಡ್‌ಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಹೇಳಲಾಗಿದೆ.