ಇಂಡಿಯನ್ ಪ್ರೀಮಿಯರ್ ಲೀಗ್ ಅಂದ ತಕ್ಷಣ ನಮಗೆ ಮೊದಲು ನೆನಪಾಗೋದು RCB ಮತ್ತು CSK ಮ್ಯಾಚ್ ಇಲ್ಲಿ ಕಿಂಗ್ ವಿರಾಟ್ ಕೊಹ್ಲಿ ಹೇಗೋ ಅಲ್ಲಿ ‘ತಲಾ’ ಎಂ.ಎಸ್. ಧೋನಿ. ಕಳೆದ ಕೆಲವು ಸೀಸನ್‌ಗಳಿಂದ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಮನಸ್ಸಲ್ಲೂ ಇದ್ದ ಪ್ರಶ್ನೆ ಒಂದೇ… “ಧೋನಿ ಮುಂದಿನ ಐಪಿಎಲ್ ಆಡ್ತಾರಾ? ಅಥವಾ ನಿವೃತ್ತಿ ಘೋಷಿಸ್ತಾರಾ?” ಅಂತ. ಈಗ ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ! ಸಿಎಸ್‌ಕೆ ಅಭಿಮಾನಿಗಳೇ ರೆಡಿಯಾಗಿ, ‘ತಲಾ’ ಮತ್ತೆ ಮೈದಾನಕ್ಕಿಳಿಯೋದು ಈಗ ಅಧಿಕೃತವಾಗಿದೆ!
ಹೌದು ಗೆಳೆಯರೇ, ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಅವರು ಧೋನಿಯ ಐಪಿಎಲ್ 2026ರ ಭವಿಷ್ಯದ ಬಗ್ಗೆ ಬಿಸಿ ಬಿಸಿ ಅಪ್‌ಡೇಟ್ ನೀಡಿದ್ದಾರೆ. “ಅವರು ಆಡ್ತಾರಾ?” ಅನ್ನೋ ಪ್ರಶ್ನೆಗೆ “ಅವರು ಖಂಡಿತ ಆಡ್ತಾರೆ, ಅವರು ಆಡ್ತಾರೆ” (He will play) ಅಂತ ದೃಢವಾಗಿ ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. 44ನೇ ವಯಸ್ಸಿನಲ್ಲೂ ಧೋನಿ ಅದೇ ಉತ್ಸಾಹದೊಂದಿಗೆ ಸಿಎಸ್‌ಕೆ ಪರ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಸಂಭ್ರಮದ ಮನೆಯಲ್ಲಿ ಸೂತಕ: ಮದುವೆಗೆ ಮೊದಲೆ ಸೋದರಿಯರ ಆತ್ಮಹತ್ಯೆ
ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ, ಧೋನಿ ನಿವೃತ್ತಿಯ ನಂತರ ಕಾಮೆಂಟರಿ ಬಾಕ್ಸ್ ಒಳಗೆ ಮೈಕ್ರೋಫೋನ್ ಹಿಡಿಯೋ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. “ಆಟವನ್ನ ವಿವರಿಸೋದು ಮತ್ತು ಆಟಗಾರರನ್ನ ಟೀಕಿಸೋದರ ನಡುವೆ ಒಂದು ಸಣ್ಣ ಗೆರೆ ಇರುತ್ತೆ. ಯಾರನ್ನೂ ನೋಯಿಸದೆ ಟೀಕಿಸೋದು ಒಂದು ಕಲೆ, ಅದು ನನಗೆ ಕಷ್ಟ” ಅಂತ ಧೋನಿ ಬಹಳ ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ಅಂದ್ರೆ, ಧೋನಿ ಮೈದಾನದ ಹೊರಗಿರುವುದಕ್ಕಿಂತ ಮೈದಾನದ ಒಳಗಿರೋದನ್ನೇ ಹೆಚ್ಚು ಇಷ್ಟಪಡ್ತಿದ್ದಾರೆ.
ಕಳೆದ ಋತುವಿನಲ್ಲಿ ಸಿಎಸ್‌ಕೆ 10ನೇ ಸ್ಥಾನ ಪಡೆದು ಮುಖಭಂಗ ಅನುಭವಿಸಿತ್ತು. ಹಾಗಾಗಿ ಈ ಬಾರಿ ತಂಡದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಈಗ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ, ಧೋನಿ ನಂತರದ ಭವಿಷ್ಯಕ್ಕಾಗಿ ಸಿಎಸ್‌ಕೆ ಈಗ ಸಂಜು ಸ್ಯಾಮ್ಸನ್ ಅವರನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಇದನ್ನೂ ಓದಿ: ನಕಲಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚನೆಗೆ ನೆರವು: ಇಬ್ಬರು ಅರೆಸ್ಟ್
ಇತ್ತೀಚೆಗೆ ನಡೆದ ಹರಾಜಿನಲ್ಲಿ ಕಾರ್ತಿಕ್ ಶರ್ಮಾ ಮತ್ತು ಪ್ರಶಾಂತ್ ವೀರ್ ಅವರಂತಹ ಅನ್‌ಕ್ಯಾಪ್ಡ್ ಆಟಗಾರರಿಗೆ ತಲಾ 14 ಕೋಟಿಗೂ ಅಧಿಕ ಹಣ ನೀಡಿ ಸಿಎಸ್‌ಕೆ ಎಲ್ಲರನ್ನೂ ಬೆರಗುಗೊಳಿಸಿದೆ.
ಒಟ್ಟಿನಲ್ಲಿ ಧೋನಿ ಮತ್ತೆ ಸಿಎಸ್‌ಕೆ ಜೆರ್ಸಿ ತೊಟ್ಟು ಮೈದಾನಕ್ಕಿಳಿಯೋದು ಅವರ ಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ಹಬ್ಬದ ಸಂಭ್ರಮ ತಂದಿದೆ. ಸಂಜು ಸ್ಯಾಮ್ಸನ್ ಮತ್ತು ಧೋನಿ ಜೋಡಿ ಈ ಬಾರಿ ಸಿಎಸ್‌ಕೆಗೆ 6ನೇ ಟ್ರೋಫಿ ತಂದುಕೊಡುತ್ತಾ? ಎನ್ನುವುದನ್ನು ಕಾದುನೋಡಬೇಕಿದೆ.























