ಬಾಗಲಕೋಟೆ: ಕಂದಕಕ್ಕೆ ಟ್ರ್ಯಾಕ್ಟರ್ ಉರುಳಿ ಬಿದ್ದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಮಖಂಡಿ ಹೊರವಲಯದ ಕಟ್ಟಿಕೆರೆ ಬಳಿ ಜರುಗಿದೆ. ಘಟನೆಯಲ್ಲಿ 8 ಜನ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರ ಮೂಲದ ಮನುಷ್(23), ಹಲಕಿ(೨), ಲಕ್ಷ್ಮೀ(27), ರೇಖಾ(28) ಮೃತ ದುರ್ದೈವಿಗಳು. ಟ್ಯಾಕ್ಟರ್ ನಲ್ಲಿ ಒಟ್ಟು 20 ಜನ ಪ್ರಯಾಣಿಸುತ್ತಿದ್ದರು. ಮುಧೋಳ ಮೂಲಕ ಮಹಾರಾಷ್ಟ್ರದ ತಮ್ಮ ಊರುಗಳಿಗೆ ಕಾರ್ಮಿಕರು ವಾಪಸ್ಸಾಗುತ್ತಿದ್ದರು. ಜಮಖಂಡಿ ಶಹರ ಠಾಣೆ ವ್ಯಾಪ್ತಿಯ ಕಟ್ಟಿಕೆರೆಯ ಉದ್ಯಾನವನದ ಬಳಿ ಘಟನೆ ಸಂಭವಿಸಿದೆ.























