Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ 8 ಕಾಲು, 3 ಕಿವಿ, 2 ತಲೆ, 1 ಮುಖ. ಏನಿದು ವಿಚಿತ್ರ?

8 ಕಾಲು, 3 ಕಿವಿ, 2 ತಲೆ, 1 ಮುಖ. ಏನಿದು ವಿಚಿತ್ರ?

0
15

ಬಾಗಲಕೋಟೆ (ರಬಕವಿ-ಬನಹಟ್ಟಿ): ಸಾಮಾನ್ಯವಾಗಿ ಹಸು, ಕುರಿಗಳು ಎರಡು ತಲೆ ಅಥವಾ 5 ಕಾಲು ಹೊಂದಿರುವ ಮರಿಗಳು ಜನಿಸಿರುವ ಘಟನೆಗಳನ್ನು ನೋಡಿದ್ದೇವೆ. ಆದರೆ ಇಲ್ಲಿ 8 ಕಾಲು, 3 ಕಿವಿ, 2 ತಲೆ ಹಾಗೂ ಒಂದೇ ಮುಖ ಹೊಂದಿರುವ ವಿಚಿತ್ರ ಕುರಿ ಮರಿಯೊಂದು ಜನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹಣಮಂತ ಕರಿಗಾರ ಎಂಬುವರ ಮನೆಯ ಕುರಿ ವಿಚಿತ್ರ ರೀತಿಯ ಮರಿಗೆ ಜನ್ಮ ನೀಡಿದೆ. ಬಹು ಅಂಗಾಂಗಗಳನ್ನು ಹೊಂದಿರುವ ಮರಿಯನ್ನು ಪಶು ವೈದ್ಯ ಡಾ. ಯಲ್ಲಪ್ಪ ಅಥಣಿ ಹಾಗೂ ಈಶ್ವರ ಬಂಗಿಯವರ ಸಹಾಯದಿಂದ ಶಸ್ತ್ರಕ್ರಿಯೆ ಮಾಡಿ ಗರ್ಭದಿಂದ ಹೊರತೆಗೆಯಲಾಯಿತಾದರೂ ಕೆಲ ಹೊತ್ತಿನಲ್ಲಿ ಸತ್ತು ಹೋಗಿದೆ.

Previous articleಗದುಗಿನಲ್ಲಿ ಮತ್ತೊಂದು ದೇವರ ಮೂರ್ತಿ ಭಗ್ನ: ಭಕ್ತರ ಆಕ್ರೋಶ
Next articleಶೋಕಿ ಆಸೆಗೆ ಕಳ್ಳತನ: ಕೋಟ್ಯಂತರ ರೂ. ಮೌಲ್ಯದ ಚಿನ್ನ-ಬೆಳ್ಳಿ ವಶ