SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಕಾರು – ಬೈಕ್ ನಡುವೆ ಅಪಘಾತ: ಇಬ್ಬರು ಸಾವು

ಕಾರು – ಬೈಕ್ ನಡುವೆ ಅಪಘಾತ: ಇಬ್ಬರು ಸಾವು

0
284

ಬಾಗಲಕೋಟೆ: ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶಿರೂರು ಗ್ರಾಮ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್‌ ಸವಾರರು ಮತೃಪಟ್ಟಿದ್ದಾರೆ.

ಬಾಗಲಕೋಟೆಯಿಂದ ಕಮತಗಿ ಕಡೆಗೆ ತೆರಳುತ್ತಿದ್ದ ಗದಗ ಮೂಲದ ಸುಂದರ ಮರಿಯಪ್ಪ ತುರುಮರಿ (27), ಕಮತಗಿಯ ಕುಮಾರ ಫಕೀರಪ್ಪ ಸೀಮಿಕೇರಿ (21) ಮೃತ ದುರ್ದೈವಿಗಳು.

ಇದನ್ನೂ ಓದಿ: ಶಿವರಾತ್ರಿಯಂದೇ ಶಿವನ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು

ಭಾನುವಾರ ಸಂಜೆ 4.30ರ ಹೊತ್ತಿಗೆ ಘಟನೆ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಎಸ್‌ಪಿ ಸಿದ್ದಾರ್ಥ ಗೋಯಲ್, ಗ್ರಾಮೀಣ ಸಿಪಿಐ ರಾಮಣ್ಣ ಬಿರಾದಾರ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.