ನೆಲಮಂಗಲ: ಇತ್ತಿಚೀನ ದಿನಗಳಲ್ಲಿ ಫೋಟೋಶೂಟ್ ಒಂದು ಕ್ರೇಜ್ ಆಗಿದೆ. ಯಾವುದೇ ಸಮಾರಂಭಕ್ಕೂ ಮುನ್ನ ಫೋಟೋಶೂಟ್ ಮಾಡಿಕೊಳ್ಳುವುದು ಸಾಮಾನ್ಯವಾಗುತ್ತಿದೆ. ಆದರೆ, ಈ ಕ್ರೇಜ್ ಅವಘಡಗಳಿಗೆ ಕಾರಣವಾದ ಉದಾಹರಣೆಗಳು ಸಾಕಷ್ಟಿದೆ. ಈ ಸಾಲಿಗೆ ಮತ್ತೊಂದು ಘಟನೆ ಸೇರಿದೆ. ಫೋಟೋಶೂಟ್‌ಗೆ ಮುಂದಾದ ಗರ್ಭಿಣಿ ತಾಯಿಯೋರ್ವಳು ಮಗುವನ್ನು ಕಳೆದುಕೊಂಡ ಘಟನೆ ನಡೆದಿದೆ.
ಎರಡನೇ ಮಗುವನ್ನ ಬರಮಾಡಿಕೊಳ್ಳುವ ಖುಷಿಯಲ್ಲಿದ್ದ ಕುಟುಂಬಕ್ಕೆ ಇದೀಗ ಬಿಗ್ ಶಾಕ್ ಎದುರಾಗಿದೆ. ನೆಲಮಂಗಲದ ಸಮೀಪದ ಗಿಡೇನಹಳ್ಳಿಯ ಖಾಸಗಿ ರೆಸಾರ್ಟ್‌ವೊಂದರಲ್ಲಿ ತಾಯಿಯ ಮೆಟರ್ನಿಟಿ ಫೋಟೋಶೂಟ್ ನಡೆಯುತ್ತಿದ್ದ ವೇಳೆ ಆಕೆಯ ಮೊದಲನೇ ಮಗು ನೀರಿನ ಫೂಲ್‌ಗೆ ಬಿದ್ದು ಸಾವನ್ನಪ್ಪಿದೆ. ಮೂರು ವರ್ಷದ ಲಕ್ಷ್ಮೀರ್ ಮೃತಪಟ್ಟ ಕಂದಮ್ಮ.
ಇದನ್ನೂ ಓದಿ: ಶಿವರಾತ್ರಿ ಪೂಜೆಗೆ ನಿರಾಕರಣೆ: ಕಲಬುರಗಿ ಕೋಟೆ ಸುತ್ತ ಉದ್ವಿಗ್ನ ಸ್ಥಿತಿ
ಆಗಿದ್ದೇನು?: ಫೋಟೋಶೂಟ್ ಮಾಡಿಸಿಕೊಳ್ಳಲು ಮೊದಲ ಮಗ ಲಕ್ಷ್ಮೀರ್ ಜತೆಗೆ ತಾಯಿ ರೆಸಾರ್ಟ್‌ಗೆ ತೆರಳಿದ್ದಾರೆ. ಈ ವೇಳೆ ಎರಡನೇ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿ ತಾಯಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುವಾಗ ಮೊದಲ ಮಗನ ಕಡೆಗೆ ಗಮನ ಹರಿಸದೇ ಇಲ್ಲಿಯೇ ಆಟವಾಡಲು ಬಿಟ್ಟಿದ್ದಾರೆ. ಈ ವೇಳೆ ಮಗು ಆಟವಾಡುತ್ತ ಹತ್ತಿರದಲ್ಲಿದ್ದ ನೀರಿನ ಫೂಲ್‌ನಲ್ಲಿ ಬಿದ್ದು, ಉಸಿರುಗಟ್ಟಿ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.























