SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಸಿದ್ಧರಾಮಯ್ಯ ಅತ್ಯಂತ ಪುಕ್ಕಲ, ಹೇಡಿ CM: ಪ್ರತಾಪ್ ವಾಗ್ದಾಳಿ

ಸಿದ್ಧರಾಮಯ್ಯ ಅತ್ಯಂತ ಪುಕ್ಕಲ, ಹೇಡಿ CM: ಪ್ರತಾಪ್ ವಾಗ್ದಾಳಿ

0
303

ದಾವಣಗೆರೆ: ಮೆಟ್ರೋ ಬೆಲೆ ಏರಿಕೆ ವಿರುದ್ದ ಧ್ವನಿ ಎತ್ತಿದ ಸಂಸದ ತೇಜಸ್ವಿ ಸೂರ್ಯರನ್ನು ಬಂಧಿಸಿರುವುದನ್ನು ಕಂಡರೆ ಸಿದ್ದರಾಮಯ್ಯ ಅದೆಷ್ಟು ಪುಕ್ಕಲ, ಹೇಡಿ ಮುಖ್ಯಮಂತ್ರಿ ಎನ್ನುವುದು ತಿಳಿಯುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ಆಗನಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಂದು ವರ್ಷದಲ್ಲಿ ಎರಡು ಬಾರಿ ಮೆಟ್ರೋ ದರ ಏರಿಕೆ ಮಾಡಿದೆ. ಜನರ ತಾಳ್ಮೆಯನ್ನು ತಡೆಯಲು ಆಗೋದಿಲ್ಲ ಎಂದು ತೇಜಸ್ವಿ ಸೂರ್ಯ ಹೋರಾಟ ಮಾಡಿದ್ದಾರೆ. ಹೋರಾಟ ಮಾಡಿ ದರ ಏರಿಕೆಯನ್ನು ತಡೆ ಹಿಡಿದಿದ್ದಾರೆ. ಆದರೆ, ಇವರ ಆಡಳಿತದ ವಿರುದ್ಧ ದನಿಯೆತ್ತಿದವರನ್ನ ಹತ್ತಿಕ್ಕುವ ಕೆಲಸವನ್ನ ಈ ಸರ್ಕಾರದ ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಇದನ್ನೂ ಓದಿ: METRO ದರ ಏರಿಕೆ ವಿರುದ್ಧ ಖಾಲಿ ಟ್ರಂಕ್‌ ಹಿಡಿದು ತೇಜಸ್ವಿ ಪ್ರತಿಭಟನೆ

ಮೆಟ್ರೋ ಅಭಿವೃದ್ಧಿಗೆ ಕೇಂದ್ರ ಸರ್ಕಾರಿಂದ ಅನುದಾನ ಬರುತ್ತಿದೆ. ಆದರೆ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಮೆಟ್ರೋ ಗೆ ಅನುಧಾನ ನೀಡದೆ ದರ ಏರಿಕೆ ಮಾಡಿದ್ದು, ಇದರ ವಿರುದ್ದ ಸಂಸದ ತೇಜಸ್ವಿ ಸೂರ್ಯ ಹೋರಾಟ ಮಾಡಿ ನ್ಯಾಯ ಕೊಡಿಸಿದ್ದಾರೆ ಎಂದರು.

ಈಗ ಖಜಾನೆ ಖಾಲಿಯಾಗಿದೆ ಎಂದು ಖಾಲಿ ಡಬ್ಬಿ ಹಿಡಿದು ತೇಜಸ್ವಿ ಸೂರ್ಯ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದಾರೆ. ಅಂವರನ್ನು ಬಂಧನ ಮಾಡುವ ಕೆಲಸವನ್ನು ಈ ಸರ್ಕಾರ ಮಾಡಿದ್ದು, ಅವರ ವೈಫಲ್ಯವನ್ನು ತೋರಿಸಿದವರನ್ನು ಯಾವ ರೀತಿ ಹತ್ತಿಕ್ಕುತ್ತಾರೆ ಎನ್ನುವುದಕ್ಕೆ ಇದೇ ಉದಾಹರಣೆ ಎಂದು ದೂರಿದರು.

ಇದನ್ನೂ ಓದಿ: ಕಾಲೇಜು ತೆರಳುತಿದ್ದ ವಿದ್ಯಾರ್ಥಿನಿಯ ಕಿಡ್ನಾಪ್‌ಗೆ ಯತ್ನ

ಸಿದ್ದರಾಮಯ್ಯನವರು 17 ಬಜೆಟ್ ಮಂಡನೆ ಮಾಡಿ ವಿಶ್ವ ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಆಗಿದ್ದರೂ ಖಜಾನೆ ಖಾಲಿಯಾಗಿ ಅಭಿವೃದ್ಧಿ ಕೆಲಸಕ್ಕೆ ಹಣ ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ. ಬರೀ ಸಭೆ ಸಮಾರಂಭಗಳಲ್ಲಿ ಏಕವಚನದ ಉಡಾಫೆ ಮಾತನಾಡುವುದು ಬಿಟ್ಟು ಇವರಿಗೆ ಏನು ಗೊತ್ತಿಲ್ಲ. 17 ಬಜೆಟ್ ಮಂಡನೆ ಮಾಡಿದ ನಿಮಗೆ ಅರ್ಥಿಕ ವ್ಯವಸ್ಥೆಯ ಗಂಧ ಗಾಳಿ ಗೊತ್ತಿಲ್ಲ ಎಂದು ಹರಿಹಾಯ್ದರು.

ಒಬ್ಬ ಯುವ ಸಂಸದ ನಿಮ್ಮನ್ನು ಪ್ರಶ್ನೆ ಮಾಡಿದರೆ ಅರೆಸ್ಟ್ ಮಾಡಿಸುತ್ತೀರಿ. ಇದರಿಂದ‌ ನೀವು ಎಷ್ಟು ಪುಕ್ಕಲ, ಹೇಡಿ ಮುಖ್ಯಮಂತ್ರಿ ಆಗಿರಬಹುದು ಎಂಬುದು ಬಹಿರಂಗವಾಗಿದೆ. ಕರ್ನಾಟಕ ಕಂಡ ಅತ್ಯಂತ ಪುಕ್ಕಲ ಹೇಡಿ ಮುಖ್ಯಮಂತ್ರಿ ನೀವು ಎಂದು ವಾಗ್ದಾಳಿ ನಡೆಸಿದರು.