ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಹಾಗೂ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ.
ಮೆಟ್ರೊ ಪ್ರಯಾಣ ದರ ಶೇ. 5ರಷ್ಟು ಹೆಚ್ಚಳ ದರ ಮಾಡಲು ಬಿಎಂಆರ್‌ಸಿಎಲ್ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಸದ್ಯ ಕನಿಷ್ಠ 10 ರೂ. ಮತ್ತು ಗರಿಷ್ಠ 90 ರೂ. ಇರುವ ಮೆಟ್ರೊ ಪ್ರಯಾಣದ ದರ, ಇನ್ನು ಶೇ. 5 ರಷ್ಟು ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ದೊರೆತಿದ್ದು, ಇದರಿಂದ ಕನಿಷ್ಠ 1 ರೂ. ದಿಂದ ಗರಿಷ್ಟ 10 ರೂ. ಏರಿಕೆಯಾಗಲಿದೆ. ಈ ಪರಿಷ್ಕತ ದರ ಫೆಬ್ರವರಿ 9ರಿಂದ ಜಾರಿಗೆ ಬರಲಿದೆ.
ಪ್ರತಿ ವರ್ಷ ಶೇ 5ರಷ್ಟು ಪ್ರಯಾಣದರ ಹೆಚ್ಚಳ ಮಾಡಬಹುದೆಂದು ಬಿಎಂಆರ್‌ಸಿಎಲ್ ದರ ನಿಗದಿ ಸಮಿತಿ ಕಳೆದ ವರ್ಷವೇ ಶಿಫಾರಸು ಮಾಡಿತ್ತು. ಈಗ ದರ ಹೆಚ್ಚಳಕ್ಕೆ ಹಸಿರು ನಿಶಾನೆ ದೊರೆತಿದ್ದು, ಬಿಎಂಆರ್‌ಸಿಎಲ್ ಅಧಿಕೃತ ದರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.




















