ಸಿಂಧನೂರು: ಮದುವೆ ಮನೆಯಲ್ಲಿ ಸಂಭ್ರಮ ಮನೆಮಾಡಬೇಕಿದ್ದ ಹೊತ್ತಿನಲ್ಲೇ ವಿಧಿ ಅಟ್ಟಹಾಸ ಮೆರೆದಿದೆ. ಹಿರಿಯ ಮಗನ ಮದುವೆಯ ದಿನದಂದೇ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಅತ್ಯಂತ ದುಃಖಕರ ಘಟನೆ ನಗರದ ಗಂಗಾನಗರ ಬಡಾವಣೆಯಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಮೃತರನ್ನು ನಗರದ ಗಂಗಾನಗರ ನಿವಾಸಿ ಶರಣಯ್ಯಸ್ವಾಮಿ ಕಂದಗಲ್ (55) ಎಂದು ಗುರುತಿಸಲಾಗಿದೆ.
ನಡೆದಿದ್ದೇನು?
ಭಾನುವಾರ ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಶರಣಯ್ಯಸ್ವಾಮಿ ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ ವಿವಾಹ ನಿಗದಿಯಾಗಿತ್ತು. ಮದುವೆಯ ಮುನ್ನಾ ದಿನವಾದ ಶನಿವಾರವಷ್ಟೇ ಕುಟುಂಬ ವರ್ಗದವರೆಲ್ಲರೂ ಸೇರಿ ದೇವತಾ ಕಾರ್ಯಗಳನ್ನು ಅತ್ಯಂತ ಸಡಗರ ಮತ್ತು ಸಂತೋಷದಿಂದ ನೆರವೇರಿಸಿದ್ದರು.
ಆದರೆ, ಶನಿವಾರ ರಾತ್ರಿ ವೇಳೆ ಏಕಾಏಕಿ ಶರಣಯ್ಯಸ್ವಾಮಿ ಅವರಿಗೆ ರಕ್ತದೊತ್ತಡ ಕಡಿಮೆಯಾಗಿ (Low BP), ತೀವ್ರ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಎಚ್ಚೆತ್ತ ಕುಟುಂಬಸ್ಥರು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮದುವೆ ಸಂಭ್ರಮದಲ್ಲಿ ತೇಲಾಡಬೇಕಿದ್ದ ಮನೆಯಲ್ಲಿ, ಮದುವೆಯ ದಿನವೇ ತಂದೆಯ ಸಾವು ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಭಾನುವಾರ ಮಧ್ಯಾಹ್ನ ನಗರದ ವೀರಶೈವ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
























Downloaded the iq777loginapp and it’s super convenient. Access my account instantly. Less waiting, more play time! Must have if you are already playing: iq777loginapp